ಅಟ್ಟಾಡಿಸಿಕೊಂಡು ಬಂದ ಹುಲಿ, ವ್ಯಾಘ್ರನ ಮುಂದೆ ಯುವಕ ಜೀವ ಉಳಿಸಿಕೊಂಡಿದ್ದೇಗೆ? ಭಯಾನಕ ವಿಡಿಯೋ!
ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ.Man Escape

ಮಹಾರಾಷ್ಟ್ರ: ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ.
ಮಹಾರಾಷ್ಟ್ರದ ಭಂದಾರಾ ಜಿಲ್ಲೆಯಲ್ಲಿ ಕಳೆದ ಶನಿವಾರ ಕಾಡಿನಿಂದ ನಾಡಿಗೆ ಬಂದಿದ್ದ ಹುಲಿಯನ್ನು ಯುವಕರ ಗುಂಪೊಂದು ಕಾಡಿಗೆ ಅಟ್ಟಲು ಮುಂದಾಗಿತ್ತು. ಈ ವೇಳೆ ಉದ್ರಿಕ್ತ ಜನರತ್ತ ನುಗ್ಗಿದ ಹುಲಿ ಯುವಕನೋರ್ವನನ್ನು ಕೆಡವಿಕೊಂಡಿತ್ತು. ಈ ವೇಳೆ ಯುವಕ ಸತ್ತಂತೆ ನಟಿಸಿದ್ದಾನೆ. ಇದನ್ನು ಕಂಡ ಹುಲಿ ಆತನನ್ನು ಬಿಟ್ಟು ಅಲ್ಲಿಂದ ಓಡಿ ಹೋಯಿತು.
ಸ್ವಲ್ಪ ಯಾಮಾರಿದ್ದರೂ ಹುಲಿ ಯುವಕನ ಕತ್ತಿಗೆ ಬಾಯಿ ಹಾಕಿ ಜೀವ ತೆಗೆಯಬಹುದಿತ್ತು. ಆದರೆ ಅದೃಷ್ಟವಶಾತ್ ಯುವ ಸಮಯಪ್ರಜ್ಞೆ ತೋರಿದ್ದರಿಂದ ಜೀವ ಉಳಿದಿದೆ. ಈ ವಿಡಿಯೋವನ್ನು ಐಎಫ್ಎಸ್ ಪ್ರವೀಣ್ ಕಸ್ವಾನ್ ಎಂಬುವರು ಅಪ್ಲೋಡ್ ಮಾಡಿದ್ದಾರೆ.
Here's the full video pic.twitter.com/Avvci4Bnhg
— WTF
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


