ದೆಹಲಿ ಪೊಲೀಸರಿಗೆ ಸಾಮರ್ಥ್ಯ ಇದೆ, ಆದರೆ ಕ್ರಮ ತೆಗೆದುಕೊಳ್ಳದಂತೆ ಕೇಂದ್ರದಿಂದ ಆದೇಶ ಬಂದಿದೆ: ಕೇಜ್ರಿವಾಲ್
ದೆಹಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯ ಇದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ನಿಂತುಕೊಳ್ಳಿ ಎಂದು ಕೇಂದ್ರದಿಂದ ಆದೇಶ ನೀಡಲಾಗಿದೆ ಎಂದು ದೆಹಲಿ....

ನವದೆಹಲಿ: ದೆಹಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯ ಇದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ನಿಂತುಕೊಳ್ಳಿ ಎಂದು ಕೇಂದ್ರದಿಂದ ಆದೇಶ ನೀಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.
ಜೆಎನ್ ಯು ಹಿಂಸಾಚಾರ ತಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದೆಹಲಿ ಸಿಎಂ, ಇದು ದೆಹಲಿ ಪೊಲೀಸರ ತಪ್ಪಲ್ಲ. ಅವರು ಮೇಲಿಂದ ಬರುವ ಆದೇಶಗಳನ್ನು ಪಾಲಿಸುತ್ತಿದ್ದಾರೆ. ಹಿಂಸಾಚಾರ ತಡೆಯದಂತೆ ಮೇಲಿಂದ ಆದೇಶ ಬಂದಿದೆ. ಪೊಲೀಸರು ಅದನ್ನು ಪಾಲಿಸಿದ್ದಾರೆ ಎಂದು ಆರೋಪಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ನೀವು ಏನು ಮಾಡಬೇಕಿಲ್ಲ ಎಂದು ದೆಹಲಿ ಪೊಲೀಸರಿಗೆ ಕೇಂದ್ರದಿಂದ ಆದೇಶ ಬಂದರೆ ಪಾಪ ಪೊಲೀಸರು ಏನು ಮಾಡುತ್ತಾರೆ ಎಂದರು.
ನಾವು ಅಧಿಕಾರಕ್ಕೆ ಬಂದಾಗ ರಾಷ್ಟ್ರ ರಾಜಧಾನಿಯಲ್ಲಿ ಆಸ್ಪತ್ರೆಗಳು ಮತ್ತು ಶಾಲೆಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದವು. ನಾವು ಯಾವುದೇ ವೈದರನ್ನು ಅಥವಾ ಶಿಕ್ಷಕರನ್ನು ಬದಲಾವಣೆ ಮಾಡಲಿಲ್ಲ. ಏಕೆಂದರೆ ಅವರಿಗೆ ಸುಧಾರಣೆ ಮಾಡುವ ಸಾಮರ್ಥ್ಯ ಇತ್ತು. ಆದರೆ ರಾಜಕೀಯ ಹಿತಾಸಕ್ತ ಇರಲಿಲ್ಲ ಅಷ್ಟೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


