ಜೆಎನ್ ಯು ಹಿಂಸಾಚಾರ

ಜೆಎನ್ ಯು ದಾಳಿ: ಮುಸುಕುದಾರಿ ಮಹಿಳೆಯನ್ನು ಗುರುತಿಸಿದ ಪೊಲೀಸರು
ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ಹಿಂಸಾಚಾರದ ವಿಡಿಯೋದಲ್ಲಿದ್ದ ಮುಸುಕುದಾರಿ ಮಹಿಳೆಯನ್ನು ವಿಶೇಷ ತನಿಖಾ ತಂಡವೊಂದು ಗುರುತಿಸಿದೆ. ವಿಚಾರಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಆಕೆಗೆ ನೋಟಿಸ್ ಕಳುಹಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಜೆಎನ್ ಯು ಹಿಂಸಾಚಾರ: 9 ವಿದ್ಯಾರ್ಥಿಗಳಿಗೆ ನೊಟೀಸ್ ಜಾರಿ ಮಾಡಿದ ದೆಹಲಿ ಪೊಲೀಸ್ ಎಸ್ಐಟಿ, ನಾಳೆ ವಿಚಾರಣೆ
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ 5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ 9 ವಿದ್ಯಾರ್ಥಿಗಳಿಗೆ ನೊಟೀಸ್ ಜಾರಿ ಮಾಡಿದೆ. ಶಂಕಿತರನ್ನು ನಾಳೆ ವಿಚಾರಣೆಗೆ ದೆಹಲಿ ಪೊಲೀಸರು ಕರೆದಿದ್ದಾರೆ.

ಜೆಎನ್ ಯು ಹಿಂಸಾಚಾರ: ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತು ಬಹಿರಂಗ
ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ವಿಶೇಷ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತನ್ನು ಪತ್ತೆ ಹಚ್ಚಿದೆ.

ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್
ಜ.೦5 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿಗಳು, ಡಾಟಾ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿ ವಿವಿಯ 3 ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

'ಜೆಎನ್‌ಯು ದಾಳಿ ಪ್ರಾಯೋಜಿತ ಗೂಂಡಾಗಿರಿ: ಎಚ್ ಆರ್ ಡಿ, ಗೃಹ ಇಲಾಖೆ ನೇರ ಹೊಣೆ'
ಜೆಎನ್‌ಯು ನಡೆದ ದಾಳಿ ಪ್ರಾಯೋಜಿತ ಗೂಂಡಾಗಿರಿ. ಗೃಹ ಸಚಿವ ಅಮಿತ್ ಶಾ, ಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ದಾಳಿಯ ಹೊಣೆ ಹೊರಬೇಕು. ದಾಳಿಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಜೆಎನ್ ಯು ಹಿಂಸಾಚಾರ ರಾಷ್ಟ್ರೀಯ ಸಮಸ್ಯೆಯಲ್ಲ, ಕಾಲೇಜುಗಳಲ್ಲಿ ಗ್ಯಾಂಗ್ ವಾರ್ ಗಳು ಸಾಮಾನ್ಯ: ಕಂಗನಾ ರಾನಾವತ್
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ರಾತ್ರಿ ವೇಳೆ ಮುಸುಕುಧಾರಿಗಳು ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರಾನಾವತ್, ಇದನ್ನು ಒಂದು ರಾಷ್ಟ್ರಮಟ್ಟದ ಸುದ್ದಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ದೆಹಲಿ ಪೊಲೀಸರಿಗೆ ಸಾಮರ್ಥ್ಯ ಇದೆ, ಆದರೆ ಕ್ರಮ ತೆಗೆದುಕೊಳ್ಳದಂತೆ ಕೇಂದ್ರದಿಂದ ಆದೇಶ ಬಂದಿದೆ: ಕೇಜ್ರಿವಾಲ್
ದೆಹಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯ ಇದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ನಿಂತುಕೊಳ್ಳಿ ಎಂದು ಕೇಂದ್ರದಿಂದ ಆದೇಶ ನೀಡಲಾಗಿದೆ ಎಂದು ದೆಹಲಿ....

ಜೆಎನ್‌ಯುನಲ್ಲಿ ರಾಜಕೀಯ ಮಾಡಬಾರದು: ಸ್ಮೃತಿ ಇರಾನಿ
ದೆಹಲಿಯ ಜವಾಹರ ಲಾಲ್ ನೆಹರೂ (ಜೆಎನ್‌ಯು) ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ದುರಾದೃಷ್ಟಕರ ಎಂದು ಕೇಂದ್ರ ಸಚಿವ ಮತ್ತು ಅಮೇಥಿ ಸಂಸದೆ ಸ್ಮೃತಿ ಇರಾನಿ ಸೋಮವಾರ ಹೇಳಿದ್ದಾರೆ.

ಜೆಎನ್ ಯು ಹಿಂಸಾಚಾರ: ಭಯದಿಂದ ಕ್ಯಾಂಪಸ್ ತೊರೆಯುತ್ತಿರುವ ವಿದ್ಯಾರ್ಥಿನಿಯರು
ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣದ ನಂತರ ಸುರಕ್ಷತೆಯ ಭಯದಿಂದ ಸೋಮವಾರ ಹಲವು ವಿದ್ಯಾರ್ಥಿನಿಯರು ವಿವಿ ಕ್ಯಾಂಪಸ್ ತೊರೆದಿದ್ದಾರೆ.

