ದೇಶ

ಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನಾಚರಣೆಯಾದ ಫೆ.24ರಂದು ಜಯಲಲಿತಾ ಅವರ ಜೀವನಾಧರಿತ ಬಯೋಪಿಕ್ ನಲ್ಲಿ ಚಿಕ್ಕ ವಯಸ್ಸಿನ ತಲೈವಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಫೋಟೋವೊಂದು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ
ಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ
Published On :

ಚೆನ್ನೈ: ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನಾಚರಣೆಯಾದ ಫೆ.24ರಂದು ಜಯಲಲಿತಾ ಅವರ ಜೀವನಾಧರಿತ ಬಯೋಪಿಕ್ ನಲ್ಲಿ ಚಿಕ್ಕ ವಯಸ್ಸಿನ ತಲೈವಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಫೋಟೋವೊಂದು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಚಿತ್ರದಲ್ಲಿ ಬಿಳಿಸೀರೆ ಉಟ್ಟಿರುವ ಕಂಗನಾ ಅವರು ಹಣೆಯ ಮೇಲೆ ಅಗಲ ಗುಂಡು ಬಿಂದಿಯನ್ನು ಇಟ್ಟುಕೊಂಡಿದ್ದು, ಜಯಲಲಿತಾರಂತೆಯೇ ಕಾಣಿಸಿಕೊಂಡಿದ್ದಾರೆ. 

ಜೂನ್.26 ರಂದು ತಲೈವಿ ಚಿತ್ರ ಬಿಡುಗಡೆಗೊಳ್ಳಲಿದ್ದು, ಚಿತ್ರದಲ್ಲಿ ಕಂಗಾನಾ ಅವರು 30ರ ಹರೆಯದ ಜಲಲಿತಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶನ ಮಾಡಿದ್ದು, ಈ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.