ಓರ್ವ ವಿದ್ಯಾರ್ಥಿನಿ ಲವ್‍ಗಾಗಿ ಇಬ್ಬರು ಶಿಕ್ಷಕರ ಜಗಳ, ಸಾವಿನಲ್ಲಿ ಕೊನೆಯಾಯ್ತು ಶಿಕ್ಷಕರಿಬ್ಬರ ಪ್ರೇಮ ಪುರಾಣ!
ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹದರಲ್ಲಿ ಒಂದೇ ವಿದ್ಯಾರ್ಥಿನಿಗೋಸ್ಕರ್ ಇಬ್ಬರು ಶಿಕ್ಷಕರು ಜಗಳ ಮಾಡಿಕೊಂಡು ಕೊನೆಗೆ ಇಬ್ಬರು ಶಿಕ್ಷಕರ ಸಾವಿನಲ್ಲಿ ಪ್ರಕರಣ ಅಂತ್ಯ ಕಂಡಿದೆ.

ಲಖನೌ: ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹದರಲ್ಲಿ ಒಂದೇ ವಿದ್ಯಾರ್ಥಿನಿಗೋಸ್ಕರ್ ಇಬ್ಬರು ಶಿಕ್ಷಕರು ಜಗಳ ಮಾಡಿಕೊಂಡು ಕೊನೆಗೆ ಇಬ್ಬರು ಶಿಕ್ಷಕರ ಸಾವಿನಲ್ಲಿ ಪ್ರಕರಣ ಅಂತ್ಯ ಕಂಡಿದೆ.
ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಕುರೈಥಿಯ ಎಚ್ ಪಿ ತಿವಾರಿ ಪಬ್ಲಿಕ್ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರಾದ ಅನೂಜ್ ಮತ್ತು ಸೂರಜ್ ಮೂರು ವರ್ಷಗಳಿಂದ ಅದೇ ಶಾಲೆಯ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದರು. ಈ ವಿದ್ಯಾರ್ಥಿನಿ ಸೂರಜ್ ನನ್ನು ಪ್ರೀತಿಸುತ್ತಿದ್ದಳು.
ಈ ಸುದ್ದಿ ತಿಳಿದ ಅನೂಜ್ ಸೂರಜ್ ಮೇಲೆ ಕೋಪಗೊಂಡು ವಿದ್ಯಾರ್ಥಿನಿಯನ್ನು ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಾನೆ. ನಾನು ಪ್ರೀತಿಸಿದ ಹುಡುಗಿಯನ್ನೇ ಪ್ರೀತಿಸುತ್ತಿದ್ದೀಯಾ ಎಂದು ಕೋಪಗೊಂಡು ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಅನೂಜ್ ಸೂರಜ್ ನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಆತನ ದೇಹವನ್ನು ಬಾವಿಗೆ ಎಸೆದಿದ್ದರು.
ಆದರೆ ದಿನ ಬೆಳಗಾಗುವುದರಲ್ಲಿ ಏನಾಯಿತೋ ಏನೋ. ಮಾರನೇ ದಿನ ಅನೂಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಅನೂಜ್ ಸ್ನೇಹಿತ ರತ್ನೇಶ್ ನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


