ದೇಶ

ಕಾಂಗ್ರೆಸ್ ಜೊತೆಗಿನ ಅಲ್ಪಾವಧಿಯ ಒಡನಾಟಕ್ಕೆ ವಿಷಾದವಿಲ್ಲ: ಉರ್ಮಿಳಾ

ಕಾಂಗ್ರೆಸ್ ಜೊತೆಗಿನ ಅಲ್ಪ ಅವಧಿಯ ಒಡನಾಟಕ್ಕೆ ವಿಷಾಧವಿಲ್ಲ, ಪಕ್ಷದ ನಾಯಕತ್ವದ ಬಗ್ಗೆ ತುಂಬಾ ಗೌರವ ಹೊಂದಿರುವುದಾಗಿ ಇತ್ತೀಚಿಗೆ ಕಾಂಗ್ರೆಸ್ ತೊರೆದು ಶಿವಸೇನಾ ಸೇರಿದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

ಕಾಂಗ್ರೆಸ್ ಜೊತೆಗಿನ ಅಲ್ಪಾವಧಿಯ ಒಡನಾಟಕ್ಕೆ ವಿಷಾದವಿಲ್ಲ: ಉರ್ಮಿಳಾ
ಉರ್ಮಿಳಾ ಮಾತೋಂಡ್ಕರ್
Published On :

ಮುಂಬೈ: ಕಾಂಗ್ರೆಸ್ ಜೊತೆಗಿನ ಅಲ್ಪ ಅವಧಿಯ ಒಡನಾಟಕ್ಕೆ ವಿಷಾಧವಿಲ್ಲ, ಪಕ್ಷದ ನಾಯಕತ್ವದ ಬಗ್ಗೆ ತುಂಬಾ ಗೌರವ ಹೊಂದಿರುವುದಾಗಿ  ಇತ್ತೀಚಿಗೆ ಕಾಂಗ್ರೆಸ್ ತೊರೆದು ಶಿವಸೇನಾ ಸೇರಿದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಒಂದು ರ್ಷದ ಮಹಾ ವಿಕಾಸ್ ಆಘಾದಿ ಸರ್ಕಾರ ಅದ್ಬುತವಾಗಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ನೈಸರ್ಗಿಕ ವಿಪತ್ತಿನ ಮಧ್ಯೆ ಜನರ ಕಲ್ಯಾಣದ ಬಗ್ಗೆ ಮುತುವರ್ಜಿ ವಹಿಸಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ಜನರ ನಟಿಯಾಗಿದ್ದು, ಜನರ ರಾಜಕಾರಣಿಯಾಗುವ ಮೂಲಕ ದಕ್ಷತೆಯಿಂದ ಕೆಲಸ ಮಾಡುವುದಾಗಿ 46 ವರ್ಷದ ಮಾತೋಂಡ್ಕರ್ ತಿಳಿಸಿದ್ದಾರೆ.ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಟ್ವೀಟ್ ಮಾಡುವ ರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಏನು ಮಾಡಬೇಕು, ಹೇಗೆ ಮಾಡಬೇಕು ಎಂಬುದು ಗೊತ್ತಿದೆ. ಕಲಿಯುತ್ತಲೇ ಇರುತ್ತೇನೆ ಎಂದು ಅವರು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಸೋತಿದ್ದ ಉರ್ಮಿಳಾ, ಡಿಸೆಂಬರ್ 1 ರಂದು ಶಿವಸೇನಾಗೆ ಸೇರ್ಪಡೆಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.