ದೇಶ

ಸಂವಿಧಾನದ ನಿಬಂಧನೆ ಪಾಲನೆಯಾಗಿಲ್ಲ, ಸುವೇಂದು ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ: ಸ್ಪೀಕರ್‌ ಬಿಮನ್ ಬ್ಯಾನರ್ಜಿ

ಪಶ್ಚಿಮ ಬಂಗಾಳ ರಾಜಕೀಯ ಪ್ರಹಸನ ಮುಂದುವರೆದಿದ್ದು, ಟಿಎಂಸಿ ಶಾಸಕರ ರಾಜಿನಾಮೆ ಬೆನ್ನಲ್ಲೇ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

ಸಂವಿಧಾನದ ನಿಬಂಧನೆ ಪಾಲನೆಯಾಗಿಲ್ಲ, ಸುವೇಂದು ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ: ಸ್ಪೀಕರ್‌ ಬಿಮನ್ ಬ್ಯಾನರ್ಜಿ
ಸುವೇಂದು ಅಧಿಕಾರಿ
Published On :

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯ ಪ್ರಹಸನ ಮುಂದುವರೆದಿದ್ದು, ಟಿಎಂಸಿ ಶಾಸಕರ  ರಾಜಿನಾಮೆ ಬೆನ್ನಲ್ಲೇ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳದ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು, 'ಟಿಎಂಸಿಯ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ. ಸಂವಿಧಾನದ ನಿಬಂಧನೆಗಳು ಮತ್ತು ಸದನದ ನಿಯಮಗಳಿಗೆ ಅನುಗುಣವಾಗಿ  ಸುವೇಂದು ರಾಜೀನಾಮೆ ಸಲ್ಲಿಸಿಲ್ಲ.  ಹಾಗಾಗಿ, ಅವರ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಡಿ. 21ರಂದು ತಮ್ಮ ಕೊಠಡಿಗೆ ಖುದ್ದು ಹಾಜರಾಗುವಂತೆಯೂ ಸುವೇಂದು ಅವರಿಗೆ ಬ್ಯಾನರ್ಜಿ ಸೂಚಿಸಿದ್ದಾರೆ ಎನ್ನಲಾಗಿದೆ.

'ಸುವೇಂದು ಅವರು ವೈಯಕ್ತಿಕವಾಗಿ ನನ್ನನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿಲ್ಲ. ಅಷ್ಟೇ ಅಲ್ಲ, ರಾಜೀನಾಮೆಯು ಸ್ವಯಂಪ್ರೇರಿತವಾದದ್ದೇ ಅಥವಾ ಸಕಾರಣಕ್ಕಾಗಿ ನೀಡಲಾಗಿದೆಯೇ ಎಂಬ ಬಗ್ಗೆ ಯಾವುದೇ ಸುಳಿವೂ ಇಲ್ಲ. ರಾಜೀನಾಮೆಯು ಸ್ವಯಂಪ್ರೇರಿತವಾದದ್ದು  ಮತ್ತು ಸಕಾರಣವಾದದ್ದು ಎನ್ನುವ ಬಗ್ಗೆ ನನಗೆ ಮನವರಿಕೆಯಾಗದ ಹೊರತು ಸಂವಿಧಾನದ ನಿಬಂಧನೆಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳಡಿ ನಾನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.