ದೇಶ

ಮದುವೆಗೆ 3 ದಿನ ಮುನ್ನ ವರನ ಮರ್ಮಾಂಗಕ್ಕೆ ಕತ್ತರಿಸಿದರು, ಕಾರಣ ಕೇಳಿ ಶಾಕ್ ಹಾಕ್ತೀರಾ!

ಉತ್ತರಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ಯುವಕನೋರ್ವವನ್ನು ಮರ್ಮಾಂಗವನ್ನು ಕತ್ತರಿಸುವ ಭಯಾನಕ ಘಟನೆ ನಡೆದಿದೆ.

ಮದುವೆಗೆ 3 ದಿನ ಮುನ್ನ ವರನ ಮರ್ಮಾಂಗಕ್ಕೆ ಕತ್ತರಿಸಿದರು, ಕಾರಣ ಕೇಳಿ ಶಾಕ್ ಹಾಕ್ತೀರಾ!
ಸಮೀರ್
Published On :

ಲಖನೌ: ಉತ್ತರಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ಯುವಕನೋರ್ವವನ್ನು ಮರ್ಮಾಂಗವನ್ನು ಕತ್ತರಿಸುವ ಭಯಾನಕ ಘಟನೆ ನಡೆದಿದೆ. 

ಸಮೀರ್ ಹಲ್ಲೆಗೊಳಗಾದ ಯುವಕನಾಗಿದ್ದು ಇತನ ಮದುವೆಗೆ ಕೇವಲ ಮೂರು ದಿನ ಇರುವಾಗಲೇ ಈ ಘಟನೆ ನಡೆದಿದೆ. ಇನ್ನು ಸಮೀರ್ ಮೇಲೆ ಹಲ್ಲೆ ಮಾಡಿದರು ಸ್ವತಃ ಆತನ ಗೆಳೆಯರೆ. ಹೌದು ಸಮೀರ್, ಫರ್ವೇಜ್ ಎಂಬಾತನಿಂದ 1 ಲಕ್ಷ ರುಪಾಯಿಯನ್ನು ಸಾಲವಾಗಿ ಪಡೆದಿದ್ದನು. 

ಹಣ ಹಿಂದಿರುಗಿಸುವಂತೆ ಫರ್ವೇಜ್ ಹಲವು ಬಾರಿ ಸಮೀರ್ ನನ್ನು ಕೇಳಿದ್ದಾನೆ. ಈ ಸಂಬಂಧ ಇಬ್ಬರಿಗೂ ಹಲವು ಬಾರಿ ಜಗಳ ಸಹ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಫರ್ವೇಜ್ ತನ್ನ ಇಬ್ಬರು ಸ್ನೇಹಿತರಿಗೆ ಸಮೀರ್ ನನ್ನು ಉಪಾಯವಾಗಿ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆ ತರುವಂತೆ ಹೇಳಿದ್ದಾನೆ. 

ಅಲ್ಲಿಗೆ ಬಂದ ಸಮೀರ್ ನ ಮರ್ಮಾಂಗವನ್ನು ಮೂವರು ಸೇರಿ ಕತ್ತರಿಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ದಾರಿಹೋಕರು ಸಮೀರನ್ನು ಕಂಡು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.