ದೇಶ

ಕುಂಭಮೇಳದಲ್ಲಿ ಟೆಂಟ್ ಪೂರೈಕೆದಾರನ ವಿರುದ್ಧ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಆರೋಪ!

2019 ರ ಕುಂಭಮೇಳದಲ್ಲಿ ಸರ್ಕಾರಕ್ಕೆ ಪೂರೈಕೆ ಮಾಡಿದ್ದ ಸರಕುಗಳಿಗೆ ನಕಲಿ ರಸೀದಿ ನೀಡಿ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಮಾಡಿರುವ ಲಾಲ್ಲೂಜಿ& ಸನ್ಸ್ ವಿರುದ್ಧ ಪ್ರಯಾಗ್ ರಾಜ್ ನ ದರಾಗ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಕುಂಭಮೇಳದಲ್ಲಿ ಟೆಂಟ್ ಪೂರೈಕೆದಾರನ ವಿರುದ್ಧ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಆರೋಪ!
ಪ್ರಯಾಗ್ ರಾಜ್ ಕುಂಭಮೇಳ-2019
Published On :

ಪ್ರಯಾಗ್ ರಾಜ್: 2019 ರ ಕುಂಭಮೇಳದಲ್ಲಿ ಸರ್ಕಾರಕ್ಕೆ ಪೂರೈಕೆ ಮಾಡಿದ್ದ ಸರಕುಗಳಿಗೆ ನಕಲಿ ರಸೀದಿ ನೀಡಿ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಮಾಡಿರುವ ಲಾಲ್ಲೂಜಿ& ಸನ್ಸ್ ವಿರುದ್ಧ ಪ್ರಯಾಗ್ ರಾಜ್ ನ ದರಾಗ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಲಲ್ಲೂಜಿ& ಸನ್ಸ್ ಪ್ರಯಾಗ್ ರಾಜ್ ನಲ್ಲಿ ಮುಂಚೂಣಿಯಲ್ಲಿರುವ ಟೆಂಟ್ ಪೂರೈಕೆದಾರರಾಗಿದ್ದು, ಮಹಾ ಕುಂಭಮೇಳ, ಮಾಘ ಮೇಳಕ್ಕೆ ಫರ್ನಿಚರ್ ಗಳು ಹಾಗೂ ಲೌಡ್ ಸ್ಪೀಕರ್ ಗಳನ್ನು ಪೂರೈಕೆ ಮಾಡುತ್ತಿದ್ದರು.

ಹೆಚ್ಚುವರಿ ಕುಂಭಮೇಳದ ಅಧಿಕಾರಿ, ದಯಾನಂದ್ ಪ್ರಸಾದ್ ದೂರಿನ ಅನ್ವಯ ಎಫ್ಐಆರ್ ನ್ನು ದಾಖಲಿಸಲಾಗಿದೆ. ವಂಚನೆಯಲ್ಲಿ ಭಾಗಿಯಾಗಿರುವ 11 ಜನ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಯಾಗ್ ರಾಜ್ ಮೇಳ ಪ್ರಾಧಿಕಾರದಿಂದ ಸಂಸ್ಥೆಯನ್ನು ಮುಂದಿನ 5 ವರ್ಷಗಳ ಕಾಲ ಕಪ್ಪು ಪಟ್ಟಿಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.