ದೇಶ

'ತುಕ್ಡೆ ತುಕ್ದೆ ಗ್ಯಾಂಗ್ ಅಧಿಕಾರದಲ್ಲಿ' : ಶಶಿ ತರೂರ್

ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ವೆಬ್ ನಾರ್ ವೊಂದರಿಂದ ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸ ನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

'ತುಕ್ಡೆ ತುಕ್ದೆ ಗ್ಯಾಂಗ್ ಅಧಿಕಾರದಲ್ಲಿ' : ಶಶಿ ತರೂರ್
ಶಶಿ ತರೂರ್
Published On :

ನವದೆಹಲಿ: ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವೆಬ್ ನಾರ್ ವೊಂದರಿಂದ  ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಹಿಂದಿ ಒಂದು ವೇಳೆ ಅರ್ಥವಾಗದಿದ್ದರೆ ವೆಬ್ ನಾರ್ ನಿಂದ ಹೊರ ಹೋಗಿ ಎಂದು ತಮಿಳರಿಗೆ ಭಾರತ ಸರ್ಕಾರದ ಕಾರ್ಯದರ್ಶಿಯೊಬ್ಬರು ಹೇಳಿರುವುದು ಅತ್ಯುದ್ಬುತವಾಗಿದೆ. ಸರ್ಕಾರಕ್ಕೆ ಯಾವುದೇ ಶಿಷ್ಟತೆ ಇದ್ದರೆ ಕೂಡಲೇ ಆ ಕಾರ್ಯದರ್ಶಿಯನ್ನು  ತಮಿಳು ನಾಗರಿಕ ಸೇವಕನನ್ನಾಗಿ ನೇಮಿಸಬೇಕು! ಈಗ ಅಧಿಕಾರದಲ್ಲಿರುವ ತುಕ್ಡೆ-ತುಕ್ಡೆ ಗ್ಯಾಂಗ್ ದೇಶದ ಏಕತೆಯನ್ನು ನಾಶಮಾಡಲು ನಿರ್ಧರಿಸಿದೆಯೇ? ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಿಂದಿ ಭಾಷೆ ಚೆನ್ನಾಗಿ ಬರಲಿದ್ದು, ಹಿಂದಿಯಲ್ಲಿ ಮಾತನಾಡಲು ಆದ್ಯತೆ ನೀಡುತ್ತೇನೆ. ಇಂಗ್ಲೀಷ್ ಬೇಕೆನ್ನುವವರು ಹೊರ ಹೋಗಬಹುದು ಎಂದು ಕೊಟೆಚಾ ಹೇಳುವ 40 ಸೆಕೆಂಡ್ ಗಳ  ವಿಡಿಯೋ ಕ್ಲಿಫ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.