ನಾಗ ಶಾಂತಿ ಮಾತುಕತೆಯಲ್ಲಿ ಕೇಂದ್ರದ ನಡೆ ಬಗೆಗೆ ದೇವೇಗೌಡ ಕಳವಳ
ನಾಗಾ ಸಮಸ್ಯೆಯನ್ನು ಬಗೆಹರಿಸಲು ಎನ್ಎಸ್ಸಿಎನ್ (ಐಎಂ) ನೊಂದಿಗೆ ಕೇಂದ್ರ "ಒರಟಾದ ರೀತಿಯಲ್ಲಿ" ಮಾತುಕತೆಗಳುಗೆ ಮುಂದಾಗಿರುವುದಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲಾ ಅಪನಂಬಿಕೆಯನ್ನು ಬದಿಗಿಟ್ಟು ಶಾಂತಿ ಒಪ್ಪಂದವನ್ನು ಶೀಘ್ರವಾಗಿ ಜಾರಿಗೆ ತರಲಾಗುತ್ತದೆ ಎಂದು ತಾನು ಆಶಿಸುವುದಾಗಿ ಅವರು ಹೇಳಿದರು.

ಬೆಂಗಳೂರು: ನಾಗಾ ಸಮಸ್ಯೆಯನ್ನು ಬಗೆಹರಿಸಲು ಎನ್ಎಸ್ಸಿಎನ್ (ಐಎಂ) ನೊಂದಿಗೆ ಕೇಂದ್ರ "ಒರಟಾದ ರೀತಿಯಲ್ಲಿ" ಮಾತುಕತೆಗಳುಗೆ ಮುಂದಾಗಿರುವುದಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲಾ ಅಪನಂಬಿಕೆಯನ್ನು ಬದಿಗಿಟ್ಟು ಶಾಂತಿ ಒಪ್ಪಂದವನ್ನು ಶೀಘ್ರವಾಗಿ ಜಾರಿಗೆ ತರಲಾಗುತ್ತದೆ ಎಂದು ತಾನು ಆಶಿಸುವುದಾಗಿ ಅವರು ಹೇಳಿದರು.
ಸೋಮವಾರ ದೇವೇಗೌಡ ಈ ಸಂಬಂಧ ಹೇಳಿಕೆ ನೀಡಿದ್ದು “ನಾಗಾ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ಎನ್‌ಎಸ್‌ಸಿಎನ್ (ಐಎಂ) ನೊಂದಿಗೆ ನಡೆಸಿದ ಮಾತುಕತೆಗಳು ಒರಟಾದ ರೀತಿಯಲ್ಲಿದೆ ಎಂದು ಪತ್ರಿಕೆ ವರದಿಗಳು ಸೂಚಿಸಿವೆ. ಮಾತುಕತೆಗಳಲ್ಲಿ ಭಾಗಿಯಾಗಿರುವವರು ಇತ್ತೀಚಿನ ಹೇಳಿಕೆಗಳಿಂದ ಅಪನಂಬಿಕೆ ಉಂಟಾಗಿದೆ ಎಂಬುದು ಸ್ಪಷ್ಟವಾಗಿದೆ.”
1997 ರಲ್ಲಿ ಆಗಿರುವ ಕದನ ವಿರಾಮ ಒಪ್ಪಂದವು ರಚನಾತ್ಮಕ ರಾಜತಾಂತ್ರಿಕತೆಯ ಪರಿಣಾಮವಾಗಿದೆ ಎಂದು ಅವರು ಹೇಳಿದರು.
1997ರಲ್ಲಿ ದೇವೇಗೌಡ ಪ್ರಧಾನಿಯಾಗಿದ್ದ ವೇಳೆ ನಾಗಾ ಗುಂಪಿನ ನಾಯಕರಾಗಿದ್ದ ಐಸಾಕ್ ಚೀಶಿ ಸ್ವುಹಾಗೂ ತುಂಗ್ಲಿಂಗ್ ಮುಯಿವಾ ಅವರೊಡನೆ ಜೂರಿಚ್ ನಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


