ಜಾಗತಿಕ ವಸತಿ ಮಾರುಕಟ್ಟೆಯಲ್ಲಿ ಬೆಂಗಳೂರಿಗೆ 26 ನೇ ಸ್ಥಾನ
ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರು 26 ನೇ ಸ್ಥಾನಪಡೆದಿದ್ದರೆ ರಾಜಧಾನಿ ನವದೆಹಲಿ 27ನೇ ಸ್ಥಾನದಲ್ಲಿದೆ.

ನವದೆಹಲಿ: ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರು 26 ನೇ ಸ್ಥಾನಪಡೆದಿದ್ದರೆ ರಾಜಧಾನಿ ನವದೆಹಲಿ
27ನೇ ಸ್ಥಾನದಲ್ಲಿದೆ.
ಈ ವಿಚಾರದಲ್ಲಿ ಬೆಂಗಳೂರು ದೆಹಲಿಯನ್ನು ಹಿಂದೆ ನೂಕಿದೆ.ಇದು ಜಾಗತಿಕ ಮಟ್ಟದಲ್ಲಿ ನಡೆದಿರುವ ಮೌಲ್ಯಮಾಪನದ ಫಲಿತಾಂಶ. ನೈಟ್ ಫ್ರಾಂಕ್ ನೀಡಿರುವ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಈ ಪಟ್ಟಿಯಲ್ಲಿ ಮುಂಬೈ 32ನೇ ಸ್ಥಾನದಲ್ಲಿದೆ ಎಂದು 'ಪ್ರೈಮ್ ಗ್ಲೋಬಲ್ ಸಿಟೀಸ್ ಸೂಚ್ಯಂಕ 2020 ತನ್ನ ವರದಿಯಲ್ಲಿ ತಿಳಿಸಿದೆ.
2020ರಲ್ಲಿ ಮೊದಲ ಮೂರು ತಿಂಗಳ ವರದಿಗೆ ಹೋಲಿಸಿದಲ್ಲಿ ಬೆಂಗಳೂರು,ಮುಂಬೈ ತಲಾ ಒಂದು ಸ್ಥಾನ ಮೇಲಕ್ಕೆ ಏರಿಕೆಯಾಗಿದೆ. ನೈಟ್ ಪ್ರಕಾರ ವಿಶ್ವದ ಪ್ರಮುಖ ವಸತಿ ಮಾರುಕಟ್ಟೆಯಲ್ಲಿ 26ನೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು ಎನಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


