ಕ್ಯಾಡಿಲಾದಿಂದ ದೇಶದ ಅಗ್ಗದ ಕೋವಿಡ್-19 ಔಷಧ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ರೆಮ್ಡಾಕ್ ಬ್ರಾಂಡ್ ಹೆಸರಿನಲ್ಲಿರೆಮ್ಡೆಸಿವಿರ್ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಔಷಧೀಯ ಸಂಸ್ಥೆ ಜಿಡಸ್ ಕ್ಯಾಡಿಲಾ ಗುರುವಾರಹೇಳಿದೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ರೆಮ್ಡಾಕ್ ಬ್ರಾಂಡ್ ಹೆಸರಿನಲ್ಲಿ
ರೆಮ್ಡೆಸಿವಿರ್ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಔಷಧೀಯ ಸಂಸ್ಥೆ ಜಿಡಸ್ ಕ್ಯಾಡಿಲಾ ಗುರುವಾರ
ಹೇಳಿದೆ.
ಇದರ ಬೆಲೆ 100 ಮಿಲಿ ಗ್ರಾಂಗೆ 2800 ರೂ. ಆಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಕೋವಿಡ್-19 ರೋಗಿಗಳ
ಚಿಕಿತ್ಸೆಗಾಗಿ ದೇಶಾದ್ಯಂತ ಎಲ್ಲಾ ಕಡೆ ದೊರೆಯುವಂತೆ ವಿತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಕೋವಿಡ್-19 ನಿಯಂತ್ರಿಸುವಲ್ಲಿ ರೆಮ್ಡಾಕ್ ಅತ್ಯಂತ ಸೂಕ್ತ ಔಷಧವಾಗಿದ್ದು, ರೋಗಿಗಳು ಗುಣಮುಖ ಹೊಂದಲು ಅತ್ಯಂತ
ಉಪಯುಕ್ತ ಔಷಧವಾಗಿದೆ ಎಂದು ಕ್ಯಾಡಿಲಾ ಹೆಲ್ತ್ ಕೇರ್ ವ್ಯವಸ್ಥಾಪಕ ನಿರ್ದೇಶಕ ಡಾ. ಡಾ.ಶಾರ್ವಿಲ್ ಪಟೇಲ್ ಪಟೇಲ್
ಹೇಳಿದ್ದಾರೆ.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿಪಡಿಸಿ, ಉತ್ಪಾದನೆ, ವಿತರಣೆ ಹೆಚ್ಚಳ ಅಥವಾ ಹೊಸ
ಅನ್ವೇಷಣೆಯತ್ತ ಕಂಪನಿ ಗಮನ ಕೇಂದ್ರಿಕರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ವರ್ಷದ ಜೂನ್ ನಲ್ಲಿ ಜಿಡಸ್ ಕಂಪನಿ ರೆಮ್ಡಿಸೆವಿರ್ ಉತ್ಪಾದನೆ ಮತ್ತು ಮಾರಾಟ ಮಾಡಲು ಗಿಲಿಡ್ ಸೈನ್ಸ್ ಇಂಕ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು. ಕೋವಿಡ್-19 ನಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅಮೆರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರ ಅನುಮೋದನೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


