ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿಗೆ ಭವ್ಯ ಸ್ವಾಗತ!
ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜೀತ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ಥಳೀಯರು ಅಧಿಕಾರಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಚಂಡೀಘಡ: ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜೀತ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ಥಳೀಯರು ಅಧಿಕಾರಿಗೆ ಭವ್ಯ ಸ್ವಾಗತ ಕೋರಿದ್ದಾರೆ.
ಆಸ್ಪತ್ರೆಯಿಂದ ಹರ್ಜೀತ್ ಸಿಂಗ್ ಅವರನ್ನು ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ಅವರ ಮನೆಗೆ ಕರೆದುಕೊಂಡು ಬರಲಾಯಿತು. ಪಾಟಿಯಾಲ ನಿವಾಸಕ್ಕೆ ಹರ್ಜೀತ್ ಸಿಂಗ್ ಅವರನ್ನು ಕರೆದುಕೊಂಡು ಬರುತ್ತಿದ್ದಂತೆಯೇ ಅವರಿಗೆ ಸ್ಥಳೀಯರು ತಮ್ಮ ತಮ್ಮ ಮನೆಗಳ ಮೇಲೆ ನಿಂತು ಹೂಮಳೆ ಸುರಿಸಿದರು. ಅಲ್ಲದೆ ಮನೆಯ ಬಳಿ ಕೆಂಪು ಹಾಸು ಹಾಕಿ ಹರ್ಜೀತ್ ಸಿಂಗ್ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರ ಮೇಲೆ ಹೂ ಹಾಕಿದರು. ಅಲ್ಲದೆ ಭಾರತ್ ಮಾತಾಕಿ ಜೈ ಎನ್ನುತ್ತಾ ಹರ್ಜೀತ್ ಸಿಂಗ್ ಪರ ಘೋಷಣೆ ಕೂಗಿದರು. ಈ ವೇಳೆ ಹರ್ಜೀತ್ ಸಿಂಗ್ ಅವರ ಕುಟುಂಬಸ್ಥರು ಆರತಿ ಮಾಡಿ ಹರ್ಜೀತ್ ಸಿಂಗ್ ರನ್ನು ಮನೆಯೊಳಗೆ ಬರ ಮಾಡಿಕೊಂಡರು.
ಬಳಿಕ ತಮ್ಮೊಂದಿಗೆ ಬಂದಿದ್ದ ಪೊಲೀಸ್ ಅಧಿಕಾರಿಗಳಿಗೆ ಹರ್ಜೀತ್ ಸಿಂಗ್ ಧನ್ಯವಾದ ಹೇಳಿ ಬೀಳ್ಕೊಟ್ಟರು.
#PunjabPolice Inspector whose hand was chopped off was discharged from PGI today & was escorted by DGP himself
He reached home & see the celebration
God bless #HarjeetSingh #CoronaWarriors
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


