ಟ್ವೀಟ್ ಮೂಲಕ ಸಮುದಾಯದಲ್ಲಿ ಅಶಾಂತಿ ಹುಟ್ಟಿಸಲು ಯತ್ನ: ಪೋಗಟ್, ರಂಗೋಲಿ ವಿರುದ್ಧ ದೂರು ದಾಖಲು
ಮಹಾರಾಷ್ಟ್ರದ ಔರಂಗಾಬಾದ್ ವ್ಯಕ್ತಿಯೊಬ್ಬರು ಕುಸ್ತಿಪಟು-ರಾಜಕಾರಣಿ ಬಬಿತಾ ಫೋಗಟ್ ಹಾಗೂ ನಟ ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರೂ ಸಮುದಾಯಗಳಲ್ಲಿ ಅಶಾಂತಿಯನ್ನು ಹುಟ್ಟಿಸುವ ಉದ್ದೇಶದಿಂದ ನೋವೆಲ್ ಕೊರೋನಾವೈರಸ್ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ವ್ಯಕ್ತಿಯೊಬ್ಬರು ಕುಸ್ತಿಪಟು-ರಾಜಕಾರಣಿ ಬಬಿತಾ ಫೋಗಟ್ ಹಾಗೂ ನಟ ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರೂ ಸಮುದಾಯಗಳಲ್ಲಿ ಅಶಾಂತಿಯನ್ನು ಹುಟ್ಟಿಸುವ ಉದ್ದೇಶದಿಂದ ನೋವೆಲ್ ಕೊರೋನಾವೈರಸ್ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಬ್ಲಿಘಿ ಜಮಾತ್ ಗೆ ಸಂಬಂಧಿಸಿರುವ ಈ ವ್ಯಕ್ತಿ ಗುರುವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಧಿಕಾರಿಯೊಬ್ಬರು ಔರಂಗಾಬಾದ್ ಆಯುಕ್ತರ ಮೂಲಕ ದೂರನ್ನು ಇಬ್ಬರೂ (ಪೋಗಟ್ ಹಾಗೂ ರಂಗೋಲಿ) ವಾಸಿಸುವ ಪ್ರದೇಶಗಳಿಗೆ ರವಾನಿಸುತ್ತೇವೆ ಎಂದು ಹೇಳಿದರು.
"ಏಪ್ರಿಲ್ 2 ಮತ್ತು ಏಪ್ರಿಲ್ 15 ರಂದು ಫೋಗಟ್ ಮಾಡಿರುವ ಟ್ವೀಟ್ ಗಳನ್ನು ದೂರುದಾರರು ಉಲ್ಲೇಖಿಸಿದ್ದಾರೆ. ಏಪ್ರಿಲ್ 15 ರಂದು ಚಾಂಡೆಲ್ ಅವರ ಟ್ವೀಟ್ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಮತ್ತು ದ್ವೇಷವನ್ನು ಹರಡಲು ಉದ್ದೇಶಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಐಪಿಸಿ ಸೆಕ್ಷನ್ 153A ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪೋಗಟ್ ಹಾಗೂ ಚಾಂಡೆಲ್ ವಿರುದ್ಧ ಪ್ರಕರಣವನ್ನು ನೋಂದಾಯಿಸಲು ಅವರು ಒತ್ತಾಯಿಸಿದ್ದಾರೆ" ಎಂದು ಅಧಿಕಾರಿ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


