ದೇಶ

ಲಾಕ್ ಡೌನ್ ವಿಸ್ತರಣೆ: 39 ಲಕ್ಷ ಟಿಕೆಟ್ ರದ್ದುಪಡಿಸಿದ ರೈಲ್ವೆ ಇಲಾಖೆ

ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್ ಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ.

ಲಾಕ್ ಡೌನ್ ವಿಸ್ತರಣೆ: 39 ಲಕ್ಷ ಟಿಕೆಟ್ ರದ್ದುಪಡಿಸಿದ ರೈಲ್ವೆ ಇಲಾಖೆ
ಸಂಗ್ರಹ ಚಿತ್ರ
Published On :

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್ ಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ.

ಏಪ್ರಿಲ್ 15 ರಿಂದ ಮೇ.3 ರವರೆಗೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ್ದ ಸುಮಾರು 39 ಲಕ್ಷ ಟಿಕೆಟ್ ಗಳನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಗೊಳಿಸಲು ನಿರ್ಧರಿಸಿದೆ. ಮೇ.3 ರವರೆಗೆ ರದ್ದಾದ ರೈಲುಗಳ ಟಿಕೆಟ್ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೌಂಟರ್ ಗಳಲ್ಲಿ ಬುಕ್ ಮಾಡಿದವರು ಜುಲೈ 31 ರವರೆಗೆ ಮರುಪಾವತಿ ಪಡೆದುಕೊಳ್ಳಬಹುದಾಗಿದೆ. 

ಮುಂಗಡ ಪಾವತಿಗೂ ಬ್ರೇಕ್..!
ಅಂತೆಯೇ ರೈಲ್ವೇ ಇಲಾಖೆ ಮೇ. 3 ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಟಿಕೆಟ್ ಕೌಂಟರ್ ಗಳನ್ನು ಮುಚ್ಚಲಿದ್ದ್ದು, ಸರ್ಕಾರದ ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ಎಲ್ ರೀತಿಯ ರೈಲು ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಮತಿ ಇಲ್ಲ ಎಂದು ಹೇಳಿದೆ.

ಲಾಕ್ ಡೌನ್ ಮುಕ್ತಾಯದ ಹಿನ್ನಲೆಯಲ್ಲಿ ಮತ್ತೆ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಡುವ ಊಹಾಪೋಹದ ಮೇರೆಗೆ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನೂರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸೇರಿದ್ದರು. ಆದರೆ ಪೊಲೀಸರು ಲಾಠಿ ಪ್ರಹಾರ ನಡೆಸಿ  ಅವರನ್ನು ಚದುರಿಸಿದ್ದರು. ಅಲ್ಲದೆ ಸುಳ್ಳು ವದಂತಿ ಹಬ್ಬಿಸಿ ಪ್ರಚೋದನೆ ನೀಡಿ ಸಾವಿರಾರು ವಲಸಿಗರು ನಿನ್ನೆ ಮುಂಬೈಯ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ಮಾಡಿದ ವಿನಯ್ ದುಬೆಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಸ್ವಘೋಷಿತ ಕಾರ್ಮಿಕ ನಾಯಕನಾಗಿರುವ ವಿನಯ್  ದುಬೆ ಸೋಷಿಯಲ್ ಮೀಡಿಯಾಗಳಲ್ಲಿ ಚಲೋ ಘರ್ ಕಿ(ಮನೆಗೆ ಹೋಗೋಣ)ಎಂಬ ಅಭಿಯಾನವನ್ನು ಆರಂಭಿಸಿದ್ದರು. ಇದರಿಂದ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿದ್ದ ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ಪ್ರಚೋದಿಸಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.