ದೇಶ

ಕೊರೋನಾ ಎಫೆಕ್ಟ್: ಕೆಮ್ಮಿದವನ ಮೇಲೆ ಗುಂಡು ಹಾರಿಸಿದ ಭೂಪ..!

ಕೊರೋನಾ ವೈರಾಣು ಸೋಂಕಿನ ಈ ಕಾಲಘಟ್ಟದಲ್ಲಿ ಯಾರಾದರು ಸೀನಿದರೆ... ಕೆಮ್ಮಿದರೆ ಸಾಕು .. ಪಕ್ಕದಲ್ಲಿರುವವರು ಆತಂಕಕ್ಕೆ ಒಳಗಾಗುವುದು ಸಹಜ..!

ಕೊರೋನಾ ಎಫೆಕ್ಟ್: ಕೆಮ್ಮಿದವನ ಮೇಲೆ ಗುಂಡು ಹಾರಿಸಿದ ಭೂಪ..!
ಸಾಂದರ್ಭಿಕ ಚಿತ್ರ
Published On :

ನೋಯಿಡಾ: ಕೊರೋನಾ ವೈರಾಣು ಸೋಂಕಿನ ಈ ಕಾಲಘಟ್ಟದಲ್ಲಿ ಯಾರಾದರು ಸೀನಿದರೆ... ಕೆಮ್ಮಿದರೆ ಸಾಕು .. ಪಕ್ಕದಲ್ಲಿರುವವರು ಆತಂಕಕ್ಕೆ ಒಳಗಾಗುವುದು ಸಹಜ..! ಆದರೆ ಉತ್ತರ ಪ್ರದೇಶದಲ್ಲಿ ಇದೇ ಕಾರಣದಿಂದ ಪರಿಸ್ಥಿತಿ ಗುಂಡು ಹಾರಿಸುವ ಮಟ್ಟಕ್ಕೂ ತಲುಪಿದೆ.

ಗ್ರೇಟರ್ ನೋಯ್ಡಾದಲ್ಲಿ ಲ್ಯೂಡೊ ವಿಡಿಯೋ ಗೇಮ್ ಆಟ ಆಡುತ್ತಿದ್ದಾಗ ೨೫ ವರ್ಷದ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಕೆಮ್ಮುತ್ತಿದ್ದಾನೆ ಎಂಬ ಕಾರಣಕ್ಕೆ ಆರಂಭಗೊಂಡ ಜಗಳ ತೀವ್ರ ಸ್ವರೂಪಕ್ಕೆ ತಿರುಗಿ ಕೆಮ್ಮಿದ ವ್ಯಕ್ತಿ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿದ ಘಟನೆ ನಡೆದಿದೆ.

ಈ ಘಟನೆ ಮಂಗಳವಾರ ರಾತ್ರಿ ಜಾರ್ಬಾ ಪೊಲೀಸ್ ಠಾಣೆ ವ್ಯಾಪ್ತಿಯ ದಯಾನಗರ ದೇವಸ್ಥಾನದಲ್ಲಿ ನಡೆದಿದೆ.

ಪ್ರಶಾಂತ್ ಸಿಂಗ್ (ಅ) ಪ್ರವೀಶ್ (೨೫) , ಜೈ ವೀರ್ ಸಿಂಗ್ (ಅ) ಗುಲ್ಲು (೩೦) ದಯಾನಗರದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. 
ಮಂಗಳವಾರ ರಾತ್ರಿ ಪ್ರಶಾಂತ್ ಹಾಗೂ ಇತರ ಮೂವರೊಂದಿಗೆ ಲೂಡೊ ಆಟವಾಡುತ್ತಿದ್ದರು. ಆಗ ಗುಲ್ಲು ಸ್ಥಳಕ್ಕೆ ಬಂದಿದ್ದಾನೆ. ಆ ಸಮಯದಲ್ಲಿ ಪ್ರವೀಶ್ ಕೆಮ್ಮಿದರಿಂದ ಆತನೊಡನೆ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವೆ ಜಗಳ ತೀವ್ರಗೊಂಡಿದ್ದರಿಂದ ಸಹನೆ ಕಳೆದುಕೊಂಡ ಗುಲ್ಲು ತನ್ನ ಪಿಸ್ತೂಲ್ ನಿಂದ ಪ್ರವೀಶ್ ಮೇಲೆ ಗುಂಡು ಹಾರಿಸಿದ್ದಾನೆ. 
ಗುಂಡಿನ ದಾಳಿಗೆ ಒಳಗಾಗಿರುವ ಪ್ರವೀಶ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆತನ ಆರೋಗ್ಯ ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.