ಕೋವಿಡ್-19: 24 ಗಂಟೆಗಳಲ್ಲಿ 909 ಹೊಸ ಪ್ರಕರಣಗಳು, ಭಾರತದಲ್ಲಿ ಸೋಂಕಿತರ ಸಂಖ್ಯೆ 8,000ಕ್ಕೇರಿಕೆ, 273 ಮಂದಿ ಬಲಿ
ಲಾಕ್'ಡೌನ್ ಇದ್ದರೂ ಕೊರೋನಾ ವೈರಸ್ ತಾಂಡವ ನೃತ್ಯ ಪ್ರದರ್ಶಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 909 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ.

ನವದೆಹಲಿ; ಲಾಕ್'ಡೌನ್ ಇದ್ದರೂ ಕೊರೋನಾ ವೈರಸ್ ತಾಂಡವ ನೃತ್ಯ ಪ್ರದರ್ಶಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 909 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಮಹಾಮಾರಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ, ಹೀಗಾಗಿ ದೇಶಕ್ಕೆ ಕೊರೋನಾ ಕಾಲಿರಿಸಿದ ಬಳಿಕ ಅದಕ್ಕೆ ಬಲಿಯಾದವರ ಸಂಖ್ಯೆ 273ಕ್ಕೆ ಏರಿಕೆಯಾಗಿದ್ದು, 300ರ ಗಡಿಗೆ ಬಂದು ತಲುಪಿದೆ.
ಜಾಗತಿಕವಾಗಿ ಗಮನಿಸಿದರೆ, ಬಾರತದಲ್ಲಿನ ಸೋಂಕಿನ ಸಂಖ್ಯೆ ಹಾಗೂ ಸಾವಿಗೀಡಾದವರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿವಾರ 187ಮಂದಿಗೆ ಹೊಸದಾಗಿ ಸೋಂಕು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1761ಕ್ಕೆ ಹೆಚ್ಚಳವಾಗಿದೆ. ಮುಂಬೈವೊಂದರಲ್ಲೇ 1146 ಮಂದಿ ಸೋಂಕಿತರಿದ್ದಾರೆ.
ಪುಣೆಯಲ್ಲಿ 228 ಮಂದಿ ಇದ್ದಾರೆ. 17 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 127ಕ್ಕೇರಿಕೆಯಾಗಿದೆ. ಮುಂಬೈವೊಂದರಲ್ಲೇ ಶಿವಾರ 12 ಮಂದಿ ಮರಣವನ್ನಪ್ಪಿದ್ದಾರೆ. ಈ ನಡುವೆ ದೆಹಲಿಯಲ್ಲಿ 166 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೊರೋನಾ ಪೀಡಿತರ ಸಂಖ್ಯೆ 1000ದ ಗಡಿ ದಾಟಿ 1069ಕ್ಕೆ ಹೆಚ್ಚಲವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 14 ಮಂದಿ ಸಾವಿಗೀಡಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


