ಕರ್ನಾಟಕದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಲ್ಲದ ಕೇರಳ ಜನರ ಚಿಕಿತ್ಸೆಗೆ ಸಂಚಾರಕ್ಕೆ ಅನುಮತಿ
‘ಕೊರೊನಾ ಸೋಂಕು ಇಲ್ಲದೇ ಇರುವ ರೋಗಿಗಳನ್ನಷ್ಟೇ ಕರ್ನಾಟಕದ ಒಳಗೆ ಬಿಡಲು ಕರ್ನಾಟಕ ಒಪ್ಪಿದೆ. ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಗಡಿ ಮೂಲಕ ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಕರ್ನಾಟಕ ಒಪ್ಪಿಗೆ ನೀಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ತಿರುವನಂತಪುರ: ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಜನರಿಗೆ ವಯನಾಡಿನಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಕರ್ನಾಟಕದ ಆಸ್ಪತ್ರೆಗಳಿಗೆ ಕೊರೊನಾ ಸೋಂಕು ಇಲ್ಲದ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಗೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಥಲಪಾಡಿ ಚೆಕ್ ಪೋಸ್ಟ್ ನಲ್ಲಿರುವ ಕರ್ನಾಟಕದ ವೈದ್ಯಕೀಯ ತಂಡ, ವೈದ್ಯಕೀಯ ಪ್ರಮಾಣಪತ್ರಗಳೊಂದಿಗೆ ಯಾವ ಆಸ್ಪತ್ರೆಗೆ ಹೋಗುವುದೆಂದು ನಿಶ್ಚಯಿಸಿ ಬರುವವರನ್ನು ಪರಿಶೀಲಿಸಿ ಅನುಮತಿ ನೀಡುತ್ತದೆ ಎಂದು ಕರ್ನಾಟಕ ಪ್ರಕಟಿಸಿದೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜನರಿಗೆ ವಯನಾಡ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಲುಪಲು ಬೇಕಾದ ಸೌಕರ್ಯವನ್ನು ಕೇರಳ ಸರ್ಕಾರ ವ್ಯವಸ್ಥೆ ಮಾಡಿದೆ. ಕರ್ನಾಟಕದ ಬೈರಕುಪ್ಪ ಮತ್ತು ಮಚ್ಚೂರ್ ಮುಂತಾದ ಸ್ಥಳಗಳಿಂದ ತಮಿಳುನಾಡಿನ ಪಾಂಡಲ್ಲೂರ್ ಮತ್ತು ಗುಡಲ್ಲೂರು ತಾಲ್ಲೂಕಿನಲ್ಲಿರುವ ಜನರು ವಯನಾಡ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಳೆದ ಕೆಲವು ದಿನಗಳಲ್ಲಿ ಬೈರಕುಪ್ಪಿಯಿಂದ ಒಟ್ಟು 29 ಜನರು ಬಂದಿದ್ದಾರೆ. ತಮಿಳುನಾಡಿನಿಂದ 44 ಜನರು ಚಿಕಿತ್ಸೆಗಾಗಿ ಬಂದಿದ್ದರು. ಬೇರೆ ಯಾವುದನ್ನೂ ನಾವು ಅನುಮತಿಸುವುದಿಲ್ಲ ಎಂದು ಹೇಳಲಾಗಿದೆ.
ಕೋವಿಡ್ 19 ರ ಸಂದರ್ಭದಲ್ಲಿ ಉಚಿತ ಪಡಿತರದಲ್ಲಿ ಅನಾಥಾಶ್ರಮಗಳು, ಅನುಮತಿ ಅನ್ವಯ ಪಡಿತರ ಸಿಗುವ ಕಾನ್ವೆಂಟ್‌ಗಳು,ಆಶ್ರಮಗಳು, ಮಠಗಳು, ವೃದ್ಧಾಶ್ರಮಗಳು ಮತ್ತು ಪಡಿತರಕ್ಕಾಗಿ ಅನುಮತಿ ನೀಡುವ ಇತರ ಸಂಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


