ದೇಶ

ಆಟೋದಲ್ಲಿ ಅಪಹರಿಸಿ, 9 ಮಂದಿಯಿಂದ ಗ್ಯಾಂಗ್ ರೇಪ್, ಅರೆನಗ್ನವಾಗಿ ರಸ್ತೆ ಪಕ್ಕ ಬಿದ್ದಿದ್ದ ಮಹಿಳೆ!

ಮನೆಗೆ ಬಿಡುವ ನೆಪದಲ್ಲಿ ಮಹಿಳೆಯನ್ನು ಆಟೋಗೆ ಹತ್ತಿಸಿಕೊಂಡ ಚಾಲಕ ಆಕೆಯನ್ನು ಅಪಹರಿಸಿ ನಂತರ 8 ಮಂದಿ ಜೊತೆ ಸೇರಿ ಗ್ಯಾಂಗ್ ರೇಪ್ ಮಾಡಿ ಆಕೆಯನ್ನು ವಿವಸ್ತ್ರವಾಗಿ ರಸ್ತೆ ಪಕ್ಕ ಎಸೆದು ಹೋಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

ಆಟೋದಲ್ಲಿ ಅಪಹರಿಸಿ, 9 ಮಂದಿಯಿಂದ ಗ್ಯಾಂಗ್ ರೇಪ್, ಅರೆನಗ್ನವಾಗಿ ರಸ್ತೆ ಪಕ್ಕ ಬಿದ್ದಿದ್ದ ಮಹಿಳೆ!
ಸಂಗ್ರಹ ಚಿತ್ರ
Published On :

ಅಗರ್ತಲ: ಮನೆಗೆ ಬಿಡುವ ನೆಪದಲ್ಲಿ ಮಹಿಳೆಯನ್ನು ಆಟೋಗೆ ಹತ್ತಿಸಿಕೊಂಡ ಚಾಲಕ ಆಕೆಯನ್ನು ಅಪಹರಿಸಿ ನಂತರ 8 ಮಂದಿ ಜೊತೆ ಸೇರಿ ಗ್ಯಾಂಗ್ ರೇಪ್ ಮಾಡಿ ಆಕೆಯನ್ನು ವಿವಸ್ತ್ರವಾಗಿ ರಸ್ತೆ ಪಕ್ಕ ಎಸೆದು ಹೋಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ. 

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಆಸ್ಪತ್ರೆಯಿಂದ ಮರಳುತ್ತಿದ್ದ 32 ಮಹಿಳೆಯ ಆಟೋ ಹತ್ತಿದ್ದರು. ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಉಳಿದ ಎಂಟು ಮಂದಿ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆಯನ್ನು ರಸ್ತೆ ಪಕ್ಕ ಎಸೆದು ಹೋಗಿದ್ದಾರೆ. 

ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಬುಧವಾರ ಬೆಳಗ್ಗೆ ಸ್ಥಳೀಯರು ಆಕೆಯನ್ನು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಮಹಿಳೆ ಗಂಡ ಪೊಲೀಸರಿಗೆ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ್ದು ಈ ಸಂಬಂಧ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. 

ಸದ್ಯ ಅತ್ಯಾಚಾರ ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.