ತೇಜಸ್ ಅರೆಸ್ಟೆಡ್ ಲ್ಯಾಂಡಿಂಗ್ ಯಶಸ್ವಿ: ಈ ದಾಖಲೆ ಬರೆದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ?
ಸ್ವದೇಶಿ ನಿರ್ಮಾಣದ ಲಘು ಯುದ್ಧ ವಿಮಾನ ತೇಜಸ್ ವಿಶೇಷ ದಾಖಲೆ ಬರೆದಿದ್ದು, ಶುಕ್ರವಾರ ನಡೆದ ಅರೆಸ್ಟೆಡ್ ಲ್ಯಾಂಡಿಂಗ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಗೆ ಭಾರತ ಸೇರುವ ಕಾಲ ಸನ್ನಿಹಿತವಾಗಿದೆ.

ನವದೆಹಲಿ: ಸ್ವದೇಶಿ ನಿರ್ಮಾಣದ ಲಘು ಯುದ್ಧ ವಿಮಾನ ತೇಜಸ್ ವಿಶೇಷ ದಾಖಲೆ ಬರೆದಿದ್ದು, ಶುಕ್ರವಾರ ನಡೆದ ಅರೆಸ್ಟೆಡ್ ಲ್ಯಾಂಡಿಂಗ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಗೆ ಭಾರತ ಸೇರುವ ಕಾಲ ಸನ್ನಿಹಿತವಾಗಿದೆ.
ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ 'ತೇಜಸ್'ನ ನೌಕಾಪಡೆ ಆವೃತ್ತಿ ಸೇವೆಗೆ ಸಿದ್ಧವಾಗಿದ್ದು, ಈ ಕುರಿತಂತೆ ನಿನ್ನೆ ನಡೆದ 'ಅರೆಸ್ಟೆಡ್ ಲ್ಯಾಂಡಿಂಗ್' (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ದೊಡ್ಡ ಸಾಧನೆಯಾಗಿದ್ದು, ಈ ಸಾಧನೆಗೈದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಇದೀಗ ಭಾರತ ಸೇರುವ ತವಕದಲ್ಲಿದೆ. ಈ ಹಿಂದೆ ಯುದ್ದ ವಿಮಾನ ತಯಾರಿಕಾ ದೇಶಗಳಾದ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದವು. ಇತ್ತೀಚೆಗಷ್ಟೇ ಈ ಪಟ್ಟಿಗೆ ಚೀನಾ ಸೇರ್ಪಡೆಯಾಗಿತ್ತು. ಇದೀಗ ತೇಜಸ್ ವಿಮಾನದ ಯಶಸ್ವೀ ಅರೆಸ್ಟೆಡ್ ಲ್ಯಾಡಿಂಗ್ ಮೂಲಕ ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.
'ತೇಜಸ್'ನ ನೌಕಾಪಡೆ ಆವೃತ್ತಿಯಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಗೋವಾದಲ್ಲಿ ಹಲವು ಬಾರಿ ಇದನ್ನು ಪರೀಕ್ಷಿಸಲಾಗಿದೆ. ಒಬ್ಬನೇ ವ್ಯಕ್ತಿ ಪ್ರಯಾಣಿಸಬಹುದಾದಂಥ ಎರಡು 'ತೇಜಸ್' ವಿಮಾನಗಳನ್ನು ನೆಲದ ಮೇಲೆ ನಿಗದಿತ ಪ್ರದೇಶದೊಳಗೆ ಅನೇಕ ಬಾರಿ ಯಶಸ್ವಿಯಾಗಿ ಇಳಿಸಲಾಗಿದೆ. 'ತೇಜಸ್'ನ ನೌಕಾಪಡೆ ಆವೃತ್ತಿಯಲ್ಲಿ ಈ ಅರೆಸ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಗೋವಾದಲ್ಲಿ ಹಲವು ಬಾರಿ ಇದನ್ನು ಪರೀಕ್ಷಿಸಲಾಗಿದೆ. ಒಬ್ಬನೇ ವ್ಯಕ್ತಿ ಪ್ರಯಾಣಿಸಬಹುದಾದಂಥ ಎರಡು 'ತೇಜಸ್' ವಿಮಾನಗಳನ್ನು ನೆಲದ ಮೇಲೆ ನಿಗದಿತ ಪ್ರದೇಶದೊಳಗೆ ಅನೇಕ ಬಾರಿ ಯಶಸ್ವಿಯಾಗಿ ಇಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಹೆಸರು ಹೇಳಲಿಚ್ಚಿಸದ ವಿಮಾನದ ಎಂಜಿನಿಯರ್ ಒಬ್ಬರು, 'ಜೂನ್-ಜುಲೈ ತಿಂಗಳಲ್ಲಿ ನಿಗದಿತ ವೇಗ ಮಿತಿಯಲ್ಲಿ 60ಕ್ಕೂ ಹೆಚ್ಚು ಬಾರಿ ನಾವು ವಿಮಾನವನ್ನು ಪರೀಕ್ಷಾರ್ಥವಾಗಿ ಇಳಿಸಿದ್ದೇವೆ'. ಆದರೆ, ಗೋವಾದಲ್ಲಿ ಪರೀಕ್ಷಾ ಸ್ಥಳದಲ್ಲಿ ವಿಮಾನದ ವೇಗವನ್ನು ಇಳಿಸಲು ಅಳವಡಿಸಿದ ತಂತ್ರಜ್ಞಾನ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಇರುವ ತಂತ್ರಜ್ಞಾನದಲ್ಲಿ ವ್ಯತ್ಯಾಸಗಳಿವೆ ಎಂಬುದು ಎಂಜಿನಿಯರ್ಗಳ ಚಿಂತೆಗೆ ಕಾರಣವಾಗಿದೆ. ಇದು ಹೆಚ್ಚಿನ ವ್ಯತ್ಯಾಸ ಉಂಟುಮಾಡಲಾರದು ಎಂದು ಎಂಜಿನಿಯರ್ಗಳು ಹೇಳುತ್ತಿದ್ದರೂ ಹಡಗಿನಲ್ಲಿ ವಿಮಾನವನ್ನು ಇಳಿಸಿ ನೋಡುವವರೆಗೂ ಖಚಿತವಾಗಿ ಏನನ್ನೂ ಹೇಳಲಾಗದು ಎಂದು ಹೇಳಿದ್ದಾರೆ.
ದಾಖಲೆ ಬರೆದ ತೇಜಸ್; 'ಅರೆಸ್ಟ್ ಲ್ಯಾಂಡಿಂಗ್' ಪರೀಕ್ಷೆ ಯಶಸ್ವಿ!
ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ’ತೇಜಸ್‘ ನಿಗದಿತ ಸ್ಥಳದಲ್ಲಿ ನಿಯಂತ್ರಿತ ಇಳಿಸುವಿಕೆ(ಅರೆಸ್ಟೆಡ್ ಲ್ಯಾಂಡಿಂಗ್) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್ ಪಾತ್ರವಾಗಿದೆ. ನೌಕಾ ಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲಿರುವ ತೇಜಸ್ ಪ್ರಮುಖ ಹಂತವನ್ನು ಪೂರೈಸಿದಂತಾಗಿದೆ. ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನ ಅತ್ಯಂತ ಕಡಿಮೆ ಅಂತರದಲ್ಲಿ ಸುರಕ್ಷಿತವಾಗಿ ಇಳಿಯುವ ಸಾಮರ್ಥ್ಯ ಪರೀಕ್ಷೆ ಇದಾಗಿತ್ತು. ಯುದ್ಧ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿ ಇಳಿಯಬೇಕು.
ಸ್ವದೇಶಿ ಯುದ್ಧವಿಮಾನ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ
ಇನ್ನು ತೇಜಸ್ ಸಾಧನೆ ಮೂಲಕ ಸ್ವದೇಶಿ ಯುದ್ಧ ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ತೇಜಸ್ ಯಶಸ್ಸು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಲಾಭ ತರಲಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


