ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ
ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ 25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.

ಹರದೋಯಿ: ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ 25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಸಾಂಡಿ ಪಟ್ಟಣದಲ್ಲಿ ಈ ಆಭರಣಗಳು ಪತ್ತೆಯಾಗಿವೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ, ಕೊಟ್ಟಾಲಿಯ ಸಾಂಡಿ ಪಟ್ಟಣದ ಕಿಡಕಿಯಾಂ ಮೊಹಲ್ಲಾದಲ್ಲಿ ಕಟ್ಟಡವೊಂದರ ತಳಪಾಯವನ್ನು ಅಗೆಯುವ ಕೆಲಸ ನಡೆಯುತ್ತಿದ್ದಾಗ, ಕಾರ್ಮಿಕರಿಗೆ ನೆಲದಲ್ಲಿ ಹುದುಗಿಟ್ಟು ಹಿತ್ತಾಳೆಯ ಗಡಿಗೆ ಕಂಡಿದ್ದು, ಅದನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ತುಂಬಿದ್ದವು.
ಸಿಕ್ಕ ಆಭರಣಗಳನ್ನು ಕಾರ್ಮಿಕರು ಪರಸ್ಪರ ಹಂಚಿಕೊಳ್ಳಲು ಪ್ರಯತ್ನಿಸಿದಂತಹ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ತಿಳಿದು, ಕಾರ್ಮಿಕರ ಬಳಿಯಲಿದ್ದ ಸುಮಾರು 25 ಲಕ್ಷ ರೂ. ಹೆಚ್ಚಿನ ಮೌಲ್ಯದ 600 ಗ್ರಾಂ ಬಂಗಾರದ ಹಾಗೂ, 4.5 ಗ್ರಾಂನಷ್ಟು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಲೋಕ್ ಪ್ರಿಯದರ್ಶಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


