ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ: ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ
2 ದಿನಗಳ ಪ್ರವಾಸ ನಿಮಿತ್ತ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದು, ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಭೇಟಿ ನೀಡಲಿರುವ ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಚೆನ್ನೈ: 2 ದಿನಗಳ ಪ್ರವಾಸ ನಿಮಿತ್ತ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದು, ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಭೇಟಿ ನೀಡಲಿರುವ ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕ್ಸಿ ಜಿನ್ ಪಿಂಗ್ ಅವರ ಪ್ರವಾಸದ ನಿಮಿತ್ತ ತಮಿಳುನಾಡಿನ ಚೆನ್ನೈ ನಿಂದ ಮಹಾಬಲಿಪುರಂ ಮಾರ್ಗ ಮಧ್ಯೆ 34 ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಸಾಗುವ ಮಾರ್ಗಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುಮಾರು 10 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕ್ಸಿ ಜಿನ್ ಪಿಂಗ್ ಮಧ್ಯಾಹ್ನ 1.30ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಅಲ್ಲಿಂದ ಮಹಾಬಲಿಪುರಂ ತಲುಪುವವರೆಗೂ ಬೈಕ್ ಗಳಲ್ಲಿ ತಮಿಳುನಾಡಿನ ವಿಶೇಷ ಪೊಲೀಸರು ಅವರನ್ನು ಹಿಂಬಾಲಿಸಲಿದ್ದಾರೆ. ಇದಲ್ಲದೆ ವಿಶೇಷ ಭದ್ರತಾ ಪಡೆಗಳು, ಎಸ್ ಪಿಜಿ ಯೋಧರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ರನ್ನು ಕರಾವಳಿ ಭದ್ರತಾ ಪಡೆಗಳು ಕೂಡ ಹಿಂಬಾಲಿಸಲಿದ್ದು, ಸಮುದ್ರ ಮಾರ್ಗಗಳ ಮೇಲೆ ಸತತ ಕಣ್ಣಿಡಲಿವೆ. ಇದಕ್ಕಾಗಿ ತೀರ ಪ್ರದೇಶದಿಂದ 24 ನಾಟಿಕಲ್ ಮೈಲು ದೂರದಲ್ಲಿ ವಿಶೇಷ ನೌಕೆಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಕ್ಸಿ ಜಿನ್ ಪಿಂಗ್ ಕಾರ್ಯಕ್ರಮದ ವೇಳೆ ಈ ಮಾರ್ಗದಲ್ಲಿ ಬರುವ ಇತರೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗಗಳ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


