ಆರ್ಥಿಕ ಅವ್ಯವಹಾರ; ಎಚ್ಡಿಐಎಲ್ ಸಿಇಓ, ಎಂಡಿ ಬಂಧನ
ಆರ್ಥಿಕ ಅವ್ಯವಹಾರಗಳ ಆರೋಪಗಳ ಸಂಬಂಧ ರಿಯಲ್ ಎಸ್ಟೇಟ್ ದೈತ್ಯ ಎಚ್ ಡಿಐ ಎಲ್ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಅವರನ್ನು ಬಂಧಿಸಲಾಗಿದೆ.

ಮುಂಬೈ: ಆರ್ಥಿಕ ಅವ್ಯವಹಾರಗಳ ಆರೋಪಗಳ ಸಂಬಂಧ ರಿಯಲ್ ಎಸ್ಟೇಟ್ ದೈತ್ಯ ಎಚ್ಡಿಐಎಲ್ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಅವರನ್ನು ಬಂಧಿಸಲಾಗಿದೆ.
ಈ ಇಬ್ಬರಿಗೆ ಸೇರಿರುವ ತಮ್ಮ 3,5೦೦ ಕೋಟಿ ರೂ.ಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮತ್ತೊಂದೆಡೆ, ಪಿಎಂಸಿ ಬ್ಯಾಂಕ್ ನಿಂದ ಎಚ್ಡಿಐಎಲ್ ಅಕ್ರಮವಾಗಿ 6,000 ಕೋಟಿ ಸಾಲ ಪಡೆದಿದೆ ಎಂದು ಹೇಳಲಾಗಿದ್ದು, ಇವರಿಬ್ಬರೂ ದೇಶ ತೊರೆಯದಂತೆ ತಡೆಯಲು ಸರ್ಕಾರ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಮತ್ತೊಂದು ಕಡೆ ಆಡಳಿತ ಮಂಡಳಿಯ ಇತರ ನಿರ್ದೇಶಕರ ಅನುಮೋದನೆ ಇಲ್ಲದೆ, ಪಿಎಂಸಿ ಬ್ಯಾಂಕ್6,500 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿತ್ತು ಎಂದು ಬ್ಯಾಂಕಿನಿಂದ ಅಮಾನತುಗೊಂಡ ವ್ಯವಸ್ಥಾಪಕ ನಿರ್ದೇಶಕ ಜೇ ಥಾಮಸ್ ಒಪ್ಪಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


