ಹೋರಿ ಕಣ್ಣು ರೇಣುಕಾಚಾರ್ಯ ಮ್ಯಾಲೆ!: ಹೋರಿ ತಿವಿತದಿಂದ ರೇಣುಕಾಚಾರ್ಯ ಜಸ್ಟ್ ಮಿಸ್!
ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಟೈಮೇ ಸರಿ ಇಲ್ಲ ಎನಿಸುತ್ತದೆ. ಇತ್ತೀಚೆಗಷ್ಟೇ ಹೋರಿಯಿಂದ ತಿವಿಸಿಕೊಂಡಿದ್ದ ರೇಣುಕಾಚಾರ ಈಗ ಮತ್ತೊಂದು ಅಂಥದ್ದೇ ಘಟನೆಯಲ್ಲಿ ಪಾರಾಗಿದ್ದಾರೆ.

ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಟೈಮೇ ಸರಿ ಇಲ್ಲ ಎನಿಸುತ್ತದೆ. ಇತ್ತೀಚೆಗಷ್ಟೇ ಹೋರಿಯಿಂದ ತಿವಿಸಿಕೊಂಡಿದ್ದ ರೇಣುಕಾಚಾರ ಈಗ ಮತ್ತೊಂದು ಅಂಥದ್ದೇ ಘಟನೆಯಲ್ಲಿ ಪಾರಾಗಿದ್ದಾರೆ.
ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಹಬ್ಬದಲ್ಲಿ ಭಾಗಿಯಾಗಿದ್ದ ಎಂಪಿ ರೇಣುಕಾಚಾರ್ಯ, ಹೋರಿಗಳ ಬಳಿ ತೆರಳಿದಾಗ ಈ ಘಟನೆ ನದೆದಿದೆ. ಶಾಸಕರು ಹೋರಿಯನ್ನು ಮುಟ್ಟಲು ಹೋಗುತ್ತಿದ್ದಂತೆಯೇ ತಿವಿಯಲು ಬಂದಿದೆ. ತಕ್ಷಣವೇ ಎಚ್ಚೆತ್ತ ಸ್ಥಳದಲ್ಲಿದ್ದವರು ಶಾಸಕರನ್ನು ಹಿಂದಕ್ಕೆ ಎಳೆದೊಯ್ದು ಹೋರಿ ತಿವಿತದಿಂದ ರಕ್ಷಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ದೊಡ್ಡೇರಿಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿಯೂ ರೇಣುಕಾಚಾರ್ಯಗೆ ಹೋರಿಯೊಂದು ತಿವಿದಿತ್ತು. ಹೋರಿ ಗುದ್ದಿದ್ದ ರಭಸಕ್ಕೆ ರೇಣುಕಾಚಾರ್ಯ ಕೆಳಗೆ ಬಿದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


