ಕಾರ್ಗಿಲ್ ಯೋಧರ ಸ್ಮರಣಾರ್ಥ 'ಮಿಸ್ಸಿಂಗ್ ಮ್ಯಾನ್' ಫಾರ್ಮೇಷನ್, ಐಎಎಫ್ ಚೀಫ್ ಧನೋವಾ ನೇತೃತ್ವ
ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಂದು ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ರಚಿಸುವ ಮೂಲಕ ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Published On :
ನವದೆಹಲಿ: ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರ ಇಂದು ಇಲ್ಲಿನ ಭಿಸಿಯಾನ ವಾಯುನೆಲೆಯಲ್ಲಿ ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ರಚಿಸುವ ಮೂಲಕ ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪಶ್ಚಿಮ ಏರ್ ಕಮಾಂಡಿಂಗ್ ಇನ್ ಚೀಫ್ ಆರ್. ನಂಬಿಯಾರ್ ಈ ಕಸರತ್ತಿನ ಭಾಗವಾಗಿದ್ದರು. ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್, ಶಸ್ತ್ರಸಜ್ಜಿತರಾಗಿ ಹುತಾತ್ಮರಾದ ವೀರ ಯೋಧರಿಗೆ ನೀಡುವ ವೈಮಾನಿಕ ಶ್ರದ್ಧಾಂಜಲಿಯಾಗಿದೆ. ಇದರಲ್ಲಿ ಎರಡು ಯುದ‍್ದ ವಿಮಾನಗಳು ಆಗಸದಲ್ಲಿ ಹಾರಾಡಿ ಬಾಣದ ರೂಪ ಮೂಡಿಸುತ್ತವೆ. ಈ ಕಸರತ್ತಿಗೆ ಅಗತ್ಯವಿರುವ ಮೂರನೇ ಯುದ್ಧ ವಿಮಾನದ ಅನುಪಸ್ಥಿತಿಯೇ ‘ಮಿಸ್ಸಿಂಗ್ ಮ್ಯಾನ್’ ಫಾರ್ಮೇಷನ್ .
ಈ ಕಸರತ್ತಿನ ನಂತರ, ಧನೋವಾ ಅವರು ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡಿದ ಭಾರತೀಯ ವಾಯುಪಡೆಯ ಧೀರರ ಸ್ಮಾರಕಗಳಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಧನೋವಾ ಅವರು 17ನೇ ಸ್ಕ್ವಾಡ್ರನ್ ನ ಯುದ್ಧ ವಿಮಾನದ ಫ್ಲೈಟ್ ಕಮಾಂಡರ್ ಆಗಿದ್ದರು.
ಮೇ 28ರಂದು ಧನೋವಾ ಅವರು ಸರ್ಸಾವ ವಾಯುನೆಲೆಗೆ ಭೇಟಿ ನೀಡಿ ಎಂಐ-17 ವಿ5 ಯುದ್ಧ ವಿಮಾನ ಚಲಾಯಿಸಿ, ಮತ್ತೊಮ್ಮೆ ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್ ಮೂಲಕ ಕಾರ್ಗಿಲ್ ಮೃತ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.
1999ರ ಮೇ 28ರಂದು ಡ್ರಾಸ್ ವಲಯದಲ್ಲಿ ಭಾರತೀಯ ವಾಯುಪಡೆ ಎಂಐ-17 ಅನ್ನು ಕಳೆದುಕೊಂಡಿತು. ಅದರಲ್ಲಿ ಸ್ಕ್ವಾಡ್ರನ್ ಲೀಡರ್ ಆರ್. ಪುಂದಿರ್, ಫ್ಲೈಟ್ ಲೆಫ್ಟಿನೆಂಟ್ ಸ್ಕ್ವಾಡ್ರನ್ ಮಹಿಲನ್, ಸರ್ಜೆಂಟ್ ಆರ್. ಕೆ. ಸಹು ಹಾಗೂ ಸರ್ಜೆಂಟ್ ಪಿವಿಎನ್ ಆರ್. ಪ್ರಸಾದ್ ಮೃತಪಟ್ಟಿದ್ದರು ಎಂದು ಭಾರತೀಯ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MiG-21‘Missing Man’ FormationKargil heroesIAF Chief Dhanoa ಮಿಸ್ಸಿಂಗ್ ಮ್ಯಾನ್\' ಫಾರ್ಮೇಷನ್ಕಾರ್ಗಿಲ್ ಯೋಧರ ಸ್ಮರಣಾರ್ಥಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


