ದೇಶ

ಬಿಜೆಪಿ ವೆಬ್‌ಸೈಟ್‌ ಮರುನಿರ್ಮಾಣಕ್ಕೆ ಕಾಂಗ್ರೆಸ್ ಸಹಾಯ! ಎರಡೂ ಪಕ್ಷಗಳಲ್ಲಿ ಒಳ ಒಪ್ಪಂದವಾಗಿದೆ: ಕೇಜ್ರಿವಾಲ್ ಕುಟುಕು

ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ವೆಬ್ ಸೈಟ್ ಹ್ಯಾಕ್ ಆ ಗಿ ಇದಾಗಲೇ 24 ಗಂಟೆ ಕಳೆದರೂ ಇನ್ನೂ ಸರಿಹೋಗಿಲ್ಲ. ಈ ನಡುವೆ ಈ ವೆಬ್ ಸೈಟ್ ಪುನರ್ ಕಾರ್ಯಾಚರಣೆಗೊಳಿಸಲು ನಾವೇನಾದರೂ....

ಬಿಜೆಪಿ ವೆಬ್‌ಸೈಟ್‌ ಮರುನಿರ್ಮಾಣಕ್ಕೆ ಕಾಂಗ್ರೆಸ್ ಸಹಾಯ! ಎರಡೂ ಪಕ್ಷಗಳಲ್ಲಿ ಒಳ ಒಪ್ಪಂದವಾಗಿದೆ: ಕೇಜ್ರಿವಾಲ್ ಕುಟುಕು
ಅರವಿಂದ ಕೇಜ್ರಿವಾಲ್
Published On :
ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ವೆಬ್ ಸೈಟ್ ಹ್ಯಾಕ್ ಆಗಿ ಇದಾಗಲೇ 24 ಗಂಟೆ ಕಳೆದರೂ ಇನ್ನೂ ಸರಿಹೋಗಿಲ್ಲ. ಈ ನಡುವೆ ಈ ವೆಬ್ ಸೈಟ್ ಪುನರ್ ಕಾರ್ಯಾಚರಣೆಗೊಳಿಸಲು ನಾವೇನಾದರೂ ಸಹಾಯ ಮಾಡಬೇಕೆ ಎಂದು ಕಾಂಗ್ರೆಸ್ ಪಕ್ಷ ಕೇಳಿದೆ. ಇದೇ ಮಾತನ್ನು ಅಸ್ತ್ರವಾಗಿಸಿಕೊಂಡಿರುವ ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ರೋಲ್ ಮಾಡಿ ಟ್ವಿಟ್ ಮಾಡಿದ್ದಾರೆ.
ಮಂಗಳವಾರ ಹ್ಯಾಕ್ ಆಗಿರುವ ಬಿಜೆಪಿ ಜಾಲತಾಣ ಇದುವರೆಗೆ ಸರಿ ಹೋಗಿಲ್ಲ.www.bjp. org.ವೆಬ್ ಸೈಟ್ ನಲ್ಲಿ ಇಂದೂ ಸಹ  ಶೀಘ್ರದಲ್ಲೇ ನಾವು ಹಿಂದಿರುಗಲಿದ್ದೇವೆ ಎಂಬ ಸಂದೇಶ  ಕಾಣಿಸಿದೆ.
ಕಾಂಗ್ರೆಸ್ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದು "ನೀವು ನಿಮ್ಮ ವೆಬ್ ತಾಣವನು ಮರಳಿ ಬಳಕೆಗೆ ಸೂಕ್ತವಾಗುವಂತೆ ಮಾಡಲು ಹೆಣಗಾಡುತ್ತಿದ್ದೀರಿ ಎನಿಸಿದೆ, ನಿಮಗೆ  ಬ್ಯಾಕ್ ಅಪ್ ಪಡೆಯಲು ಏನಾದರೂ ಸಹಾಯ ಬೇಕಾದರೆ ನಾವು ನೀಡಲು ಸಿದ್ದರಿದ್ದೇವೆ" ಎಂದಿದೆ.
ಇದೀಗ ಕೇಜ್ರಿವಾಲ್ ಈ ಎರಡೂ ಪಕ್ಷಗಳ ನಡುವೆ   ರಾಷ್ಟ್ರೀಯ ಚುನಾವಣೆಗೆ ಸಂಬಂಧ ರಹಸ್ಯ ಒಪ್ಪಂದವಾಗಿದೆ. ಎಂಬುದಾಗಿ ಹೇಳಿಕೊಂಡಿದ್ದಾರೆ."ನೀವು ದೆಹಲಿಯಲ್ಲಿ ಏನನ್ನು ಮಾಡಿದ್ದೀರೋ ಅದೇ ರೀತಿ ಇಲ್ಲಿಯೂ ನಡೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಕೆಳಗಿಳಿದರೆ ಕಾಂಗ್ರೆಸ್ ಅದನ್ನು ಮತ್ತೆ ಮೇಲೆತ್ತಲು ಸಹಾಯ ನೀಡಲಿದೆ, ಕಾಂಗ್ರೆಸ್ ಬಿಜೆಪಿಗೆ ಸಹಾಯ ಮಾಡಲಿದೆ" ಎಎಪಿ ಅಧಿಕೃತ ಟ್ವೀಟ್ ನಲ್ಲಿ ಹೇಳಿಕೊಂಡಿದೆ.
ಮಂಗಳವಾರ, ಕಾಂಗ್ರೆಸ್ ಪಕ್ಷವು ತಾವು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಎಎಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದೆ.
"ಇದೀ ದೇಶ ಮೋದಿ-ಶಾ ಜೋಡಿಯನ್ನು ಪರಾಭವಗೊಳಿಸಲು ಬಯಸಿದರೆ ಕಾಂಗ್ರೆಸ್ ಬಿಜೆಪಿಗೆ ಸಹಾಯ ನೀಡುತ್ತಿದೆ, ಈ ಮೂಲಕ ಕಾಂಗ್ರೆಸ್ ಬಿಜೆಪಿ ಏತರ ಮತಗಳನ್ನು ವಿಭಜಿಸಲು ಮುಂದಾಗಿದೆ.ಇದರಿಂದಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಏನೋ ರಹಸ್ಯ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟ. ದೆಹಲಿಯು ಈ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟದ ವಿರುದ್ಧ ಹೋರಾಡಲು ಸಿದ್ದವಿದೆ. ಇಲ್ಲಿನ ಜನರು ಈ ಅಪವಿತ್ರ ಮೈತ್ರಿಯನ್ನು ತೊಡೆದು ಹಾಕಲಿದ್ದಾರೆ" ಕೇಜ್ರಿವಾಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನ ಸಾಮಾಜಿಕ ಮಾದ್ಯಮದ ಉಸ್ತುವಾರಿ ರಮ್ಯಾ ಮೊದಲ ಬಾರಿಗೆ ಬಿಜೆಪಿ ಜಾಲತಾಣ ಹ್ಯಾಕ್ ಆಗಿರುವ ಬಗ್ಗೆ ಟ್ವೀಟ್ ನಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.