ಮೂರು ದಾಖಲೆ ಬರೆದ 2019ರ ಮಹಾ ಕುಂಭಮೇಳ
ಉತ್ತರ ಪ್ರದೇಶದ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿದ್ದು, ಕೋಟ್ಯಂತರ ಭಕ್ತರು ಇಂದು ಕೊನೆಯ ಶಾಹಿ ಸ್ನಾನದಲ್ಲಿ ಪಾಲ್ದೊಳ್ಳಲ್ಲಿದ್ದಾರೆ.

Published On :
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿದ್ದು, ಕೋಟ್ಯಂತರ ಭಕ್ತರು ಇಂದು ಕೊನೆಯ ಶಾಹಿ ಸ್ನಾನದಲ್ಲಿ ಪಾಲ್ದೊಳ್ಳಲ್ಲಿದ್ದಾರೆ. ಅಂತೆಯೇ ಹಾಲಿ ವರ್ಷದ ಕುಂಭ ಮೇಳೆ ಕೋಟ್ಯಂತರ ಜನರನ್ನು ಆಕರ್ಷಿಸುವ ಮೂಲಕ ಮೂರು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಈ ಹಿಂದೆ ಇದೇ ಕುಂಭಮೇಳದ ಆಕರ್ಷಣೆಗಾಗಿ 'ಪೇಂಟ್ ಮೈ ಸಿಟಿ' ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನಕ್ಕೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿತ್ತು. ಕಳೆದ ಫ್ರೆಬವರಿ 28ರಂದು ನಡೆದಿದ್ದ ಈ ಅಭಿಯಾನದಲ್ಲಿ 7,664 ಜನ ಜನ 'ಪೇಂಟ್ ಮೈ ಸಿಟಿ' ಅಭಿಯಾನದಲ್ಲಿ ಪಾಲ್ಗೊಂಡು 60 ಅಡಿ ಉದ್ದದ ಕ್ಯಾನ್ವಾಸ್‌ನಲ್ಲಿ ಬಣ್ಣದಲ್ಲಿ ಅದ್ದಿದ ಹಸ್ತದ ಅಚ್ಚು ಮೂಡಿಸಿದ್ದರು.
ಇನ್ನು ಇದೇ ಮಾರ್ಚ್ 1ರಂದು ಇದೇ ಸಂಗಮದ ಬಳಿ 500 ಬಸ್‌ಗಳನ್ನು 3.2 ಕಿ.ಮೀ ಉದ್ದದವರೆಗೆ ಸಾಲಾಗಿ ನಿಲ್ಲಿಸಲಾಗಿತ್ತು. ಇದು 'ಅತಿ ಉದ್ದದ ಬಸ್ ಪರೇಡ್' ಎಂಬ ದಾಖಲೆ ನಿರ್ಮಾಣ ಮಾಡಿದೆ.
ಇನ್ನು ಸ್ವಚ್ಛತೆಯಲ್ಲೂ 2019ರ ಕುಂಭಮೇಳೆ ದಾಖಲೆ ನಿರ್ಮಾಣ ಮಾಡಿದ್ದು, ಇದೇ ಮಾರ್ಚ್ 3 ಅಂದರೆ ನಿನ್ನೆ 10,000ಕ್ಕೂ ಅಧಿಕ ಪೌರಕಾರ್ಮಿಕರು ನಗರದ ವಿವಿಧೆಡೆ ಒಮ್ಮೆಲೇ ಕಸ ಗುಡಿಸುವ ಮೂಲಕ 'ಏಕಕಾಲದಲ್ಲಿ ಹೆಚ್ಚು ಜನ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ' ದಾಖಲೆ ಇದಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಈ ವರ್ಷ ಮಹಾ ಕುಂಭಮೇಳದಲ್ಲಿ ಈ ವರೆಗೂ ಸುಮಾರು 22 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶMahashivaratriಮಹಾಶಿವರಾತ್ರಿಕುಂಭಮೇಳTriveni Sangamತ್ರಿವೇಣಿ ಸಂಗಮPrayagrajಪ್ರಯಾಗ್ ರಾಜ್KumbhMela
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


