'ಅಭಿನಂದನ್ 'ಎಂಬ ಶಬ್ದದ ಅರ್ಥ ಬದಲಾಗಲಿದೆ: ಪ್ರಧಾನಿ ಮೋದಿ
ಇದುವರೆಗೆ "ಅಭಿನಂದನ್" ಎಂಬ ಸಂಸ್ಕೃತ ಪದಕ್ಕೆ ಇದ್ದ ಅರ್ಥ ಇಂದು ಬದಲಾಗಿದೆ, ಹೊಸ ಅರ್ಥ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published On :
ನವದೆಹಲಿ: ಇದುವರೆಗೆ "ಅಭಿನಂದನ್" ಎಂಬ ಸಂಸ್ಕೃತ ಪದಕ್ಕೆ ಇದ್ದ ಅರ್ಥ ಇಂದು ಬದಲಾಗಿದೆ, ಹೊಸ ಅರ್ಥ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿರುವ ಐಎಎಫ್ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನುದ್ದೇಶಿಸಿ ಪ್ರಧಾನಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಭಾರತ ಈಗ ಏನೇ ಮಾಡಿದರೂ ಜಗತ್ತು ಗಮನವಿಟ್ಟು ನೋಡುತ್ತದೆ. ಈಗಿನ ಭಾರತಕ್ಕೆ ನಿಘಂಟಿನಲ್ಲಿರುವ ಪದದ ಅರ್ಥವನ್ನೇ ಬದಲಿಸುವ ತಾಕತ್ತಿದೆ. ಈ ಹಿಂದೆ ಅಭಿನಂದನ್ ಎಂಬ ಸಂಸ್ಕೃತದ ಪದಕ್ಕೆ congratulation ಎನ್ನುವ ಅರ್ಥವಿತ್ತು. ಆದರೆ ಇನ್ನು ಮುಂದೆ ಆ ಅರ್ಥ ಬೇರೆಯಾಗಿರಲಿದೆ." ಮೋದಿ ಹೇಳಿದ್ದಾರೆ.
ದೆಹಲಿಯ ವಿಗ್ಣಾನ್ ಭವನದಲ್ಲಿ ನಡೆದ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಆಫ್ ಇಂಡಿಯಾ 2019 ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಅಭಿನಂದನ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ಸುಮಾರು ಮೂರು ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ವರ್ತಮಾನ್ ಅವರನ್ನು ಶುಕ್ರವಾರ ರಾತ್ರಿ ಒಂಬತ್ತರ ಸುಮಾರಿಗೆ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ನಿನ್ನೆ ಅಭಿನಂದನ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದೊ "ತಾಯ್ನಾಡಿಗೆ ಸ್ವಾಗತ, ವಿಂಗ್ ಕಮಾಂಡರ್ ಅಭಿನಂದನ್! ನಿಮ್ಮ ಧೈರ್ಯ ಆದರ್ಶಪ್ರಾಯವಾಗಿದ್ದು ಇದಕ್ಕಾಗಿ ಇಡೀ ದೇಶ ನಿಮ್ಮ ಕುರಿತು ಹೆಮ್ಮೆ ಪಡುತ್ತದೆ" ಎಂದು ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


