ದೇಶ

ಆರೋಗ್ಯ ಸಚಿವಾಲಯ ಸಭೆಗಳಲ್ಲಿ ಕೇವಲ ಆರೋಗ್ಯಕರ ತಿನಿಸು, ಇನ್ಮುಂದೆ ಬಿಸ್ಕೆಟ್ ಇಲ್ಲ: ಸಚಿವರ ಆದೇಶ!

ತಮ್ಮ ಸಚಿವಾಲಯ ಆವರಣದಲ್ಲಿ ಬಿಸ್ಕೆಟ್ ಗಳ ಮಾರಾಟಕ್ಕೆ ನಿಷೇಧ ಹೇರಿರುವ ಕೇಂದ್ರ ಆರೋಗ್ಯ...

ಆರೋಗ್ಯ ಸಚಿವಾಲಯ ಸಭೆಗಳಲ್ಲಿ ಕೇವಲ ಆರೋಗ್ಯಕರ ತಿನಿಸು, ಇನ್ಮುಂದೆ ಬಿಸ್ಕೆಟ್ ಇಲ್ಲ: ಸಚಿವರ ಆದೇಶ!
ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್
Published On :
ನವದೆಹಲಿ: ತಮ್ಮ ಸಚಿವಾಲಯ ಆವರಣದಲ್ಲಿ ಬಿಸ್ಕೆಟ್ ಗಳ ಮಾರಾಟಕ್ಕೆ ನಿಷೇಧ ಹೇರಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಚಿವಾಲಯದ ಸಭೆಗಳಲ್ಲಿ ಅಧಿಕಾರಿಗಳಿಗೆ ಮತ್ತು ಅತಿಥಿಗಳಿಗೆ ಕಡಲೆ, ಬಾದಾಮಿ, ಖರ್ಜೂರ ಮತ್ತು ವಾಲ್ನಟ್ ನಂತಹ ಆರೋಗ್ಯಕರ ತಿನಿಸುಗಳನ್ನು ಮಾತ್ರ ನೀಡಬೇಕೆಂದು ಆದೇಶಿಸಿದ್ದಾರೆ.
ಈ ಕುರಿತು ನಿನ್ನೆ ಆದೇಶ ಹೊರಡಿಸಿರುವ ಅವರು, ಅಧಿಕಾರಿಗಳ ಸಭೆಗಳಲ್ಲಿ ಕೇವಲ ಆರೋಗ್ಯಕರ ಸ್ನಾಕ್ಸ್ ಗಳನ್ನು ಮಾತ್ರ ನೀಡಬೇಕು, ಬಿಸ್ಕೆಟ್, ಚಿಪ್ಸ್ ನಂತಹ ತಿನಿಸುಗಳನ್ನು ನೀಡಬಾರದು ಎಂದು ಹೇಳಿದ್ದಾರೆ.
ಇನ್ನು ಮುಂದೆ ಸಭೆಗಳಲ್ಲಿ ಇಲಾಖೆಯ ಕ್ಯಾಂಟೀನ್ ಮೂಲಕ ಬಿಸ್ಕತ್ತುಗಳನ್ನು ನೀಡಲಾಗುವುದಿಲ್ಲ. ಚನ್ನದಾಲ್, ಖರ್ಜೂರ, ಹುರಿದ ಕಡಲೆ, ಬಾದಾಮಿ, ಅಕ್ರೋಟ್ ನಂತಹ ಆರೋಗ್ಯಕರ ತಿನಿಸುಗಳನ್ನು ಪೂರೈಸಲಾಗುವುದು ಎಂದು ಹೇಳಿದೆ. ಅಲ್ಲದೆ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಸಹ ವಿತರಣೆ ಮಾಡುವುದಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.