ಡಾ. ಹರ್ಷವರ್ಧನ್

ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣವನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ
ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣದ ಹಂತದಲ್ಲಿರುವುದನ್ನು ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಾನುವಾರ ಒಪ್ಪಿಕೊಂಡಿದ್ದಾರೆ.

2021 ರ ಜುಲೈ ವೇಳೆಗೆ ಭಾರತದ 25 ಕೋಟಿ ಮಂದಿಗೆ ಕೊರೋನಾ ಲಸಿಕೆ ಪೂರೈಕೆಗೆ ಸರ್ಕಾರದ ಯೋಜನೆ
2021 ರ ಜುಲೈ ವೇಳೆಗೆ ಭಾರತದ 25 ಕೋಟಿ ಮಂದಿಗೆ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 8ನೇ ವಿಮ್ಸ್ ಮಾದರಿ ಆಸ್ಪತ್ರೆಗೆ ಶೀಘ್ರ ಮಂಜೂರಾತಿ- ಡಾ. ಹರ್ಷವರ್ಧನ್
ಕೇಂದ್ರದ ಎನ್.ಡಿ.ಎ ಸರ್ಕಾರ ದೇಶದ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಕರ್ನಾಟಕದಲ್ಲಿ ವಿಮ್ಸ್ ಮಾದರಿಯ ಆಸ್ಪತ್ರೆ ಆರಂಭಿಸಲು ಅನುಮೋದನೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ದೀಪಾವಳಿಯ ವೇಳೆಗೆ ಕೊರೋನಾ ಸೋಂಕು ನಿಯಂತ್ರಣ: ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್
ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ವರ್ಷಾಂತ್ಯಕ್ಕೆ ಕೋವಿಡ್-19 ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ದೇಶದ ಪ್ರಥಮ ಕೋವಿಡ್ ಲಸಿಕೆ ವರ್ಷಾಂತ್ಯಕ್ಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆಯೊಂದು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಅಭಿವೃದ್ಧಿಯಾಗುವ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಪ್ರತಿದಿನವೂ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿ: ಡಾ. ಹರ್ಷವರ್ಧನ್
ದೇಶದಲ್ಲಿ ಪ್ರತಿದಿನವೂ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿಯಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ದೇಶೀಯವಾಗಿ ಪರೀಕ್ಷಾ ಕಿಟ್‌ಗಳ ಉತ್ಪಾದನೆ: ಮೇ 31ರೊಳಗೆ ದಿನಕ್ಕೆ 1 ಲಕ್ಷ ಪರೀಕ್ಷೆಗಳ ಗುರಿ- ಡಾ.ಹರ್ಷವರ್ಧನ್
ಮೇ ತಿಂಗಳೊಳಗೆ ಸ್ವದೇಶಿ ಕೊರೋನಾವೈರಸ್ ಟೆಸ್ಟಿಂಗ್ ಕಿಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ದೇಶ ಹೊಂದಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಅನುಸರಿಸಿದ ಕ್ರಮಕ್ಕೆ ಕೇಂದ್ರ ಸಚಿವರ ಮೆಚ್ಚುಗೆ
ದೇಶಾದ್ಯಂತ ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅನುಸರಿಸಿರುವ ಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ: ಕೇಂದ್ರ ಸಚಿವ ಹರ್ಷವರ್ಧನ್
ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಎನ್ ಡಿಎ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸಚಿವ ಡಾ ಹರ್ಷವರ್ಧನ್ ಅವರು ಹೇಳಿದ್ದಾರೆ.

