ದೇಶ

ಮನರಂಜನೆಗೆ ಸೀಮಿತವಾಗಬೇಕಿದ್ದ ಟಿಕ್‍ಟಾಕ್ ಸಾವಿಗೆ ಸಾಕ್ಷ್ಯಗಳಾಗುತ್ತಿದೆ, ಇದು ಎಂಥಾ ದುಸ್ಥಿತಿ!

ಟಿಕ್‍ಟಾಕ್ ವಿಡಿಯೋಗಳ ಮೂಲಕ ಮತ್ತೊಬ್ಬರನ್ನು ನಗಿಸಲು ಹೋಗಿ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸನ್ನಿವೇಶಗಳು ಜಾಸ್ತಿಯಾಗುತ್ತಿರುವುದು ದುರಂತವೇ ಸರಿ.

ಮನರಂಜನೆಗೆ ಸೀಮಿತವಾಗಬೇಕಿದ್ದ ಟಿಕ್‍ಟಾಕ್ ಸಾವಿಗೆ ಸಾಕ್ಷ್ಯಗಳಾಗುತ್ತಿದೆ, ಇದು ಎಂಥಾ ದುಸ್ಥಿತಿ!
ಸಂಗ್ರಹ ಚಿತ್ರ
Published On :
ಮುಂಬೈ: ಟಿಕ್‍ಟಾಕ್ ವಿಡಿಯೋಗಳ ಮೂಲಕ ಮತ್ತೊಬ್ಬರನ್ನು ನಗಿಸಲು ಹೋಗಿ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸನ್ನಿವೇಶಗಳು ಜಾಸ್ತಿಯಾಗುತ್ತಿರುವುದು ದುರಂತವೇ ಸರಿ. ವ್ಯಕ್ತಿಯೋರ್ವ ಟಿಕ್‍ಟಾಕ್ ಮಾಡುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾನೆ.
ಮಹಾರಾಷ್ಟ್ರದ ಶಿರಡಿಯಲ್ಲಿ 19 ವರ್ಷ ಪ್ರತೀಕ್ ಸಂತೋಷ್ ವಾಡೆಕರ್ ಎಂಬಾತ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆತನ ಕೈಯಲ್ಲಿದ್ದ ಪಿಸ್ತೂಲ್ ನಿಂದ ಗುಂಡು ಎದೆಗೆ ಹಾರಿ ಆತನ ಜೀವವನ್ನೇ ತೆಗೆದಿದೆ. 
ಕಾರ್ಯಕ್ರಮ ನಿಮಿತ್ತ ಪ್ರತೀಕ್ ಮತ್ತು ಆತನ ಸ್ನೇಹಿತರಾದ ನಿತಿನ್ ಅಶೋಕ್ ಮತ್ತು ಸನ್ನಿ ಪವಾರ್ ಶಿರಡಿಗೆ ಬಂದಿದ್ದರು. ಈ ವೇಳೆ ಹೋಟೆಲ್ ಬುಕ್ ಮಾಡಿದ್ದ ಮೂವರು ಟಿಕ್‍ಟಾಕ್ ವಿಡಿಯೋ ಮಾಡಲು ಮುಂದಾಗಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.