6 ತಿಂಗಳಲ್ಲಿ ಬರೊಬ್ಬರಿ 12 ವಿಮಾನಗಳನ್ನು ಕಳೆದುಕೊಂಡ ಐಎಎಫ್
ಭಾರತೀಯ ವಾಯುಪಡೆ (ಐಎಎಎಫ್) ಕಳೆದ 6 ತಿಂಗಳುಗಳಲ್ಲಿ 12 ವಿಮಾನಗಳನ್ನು ಕಳೆದುಕೊಂಡಿದೆ.

Published On :
ನವದೆಹಲಿ: ಭಾರತೀಯ ವಾಯುಪಡೆ (ಐಎಎಎಫ್) ಕಳೆದ 6 ತಿಂಗಳುಗಳಲ್ಲಿ 12 ವಿಮಾನಗಳನ್ನು ಕಳೆದುಕೊಂಡಿದೆ.
ಈಗಾಗಲೇ ಸ್ಕ್ವಾಡ್ರನ್ ಸಂಖ್ಯಾಬಲದಲ್ಲಿ ಕೊರತೆ ಎದುರಿಸುತ್ತಿರುವ ಐಎಎಫ್ ಗೆ ಇದು ಮತ್ತೊಂದು ಸಮಸ್ಯೆಯಾಗಿದೆ. ಸಾಗಣೆ ವಿಮಾನ ಆಂಟೋನಿಯೋ ಎಎನ್-32 ಇತ್ತೀಚೆಗೆ ಪತನಗೊಂಡಿದ್ದು, ಈ ವರ್ಷ ಫೈಟರ್ ಹಾಗೂ ಬಾಂಬರ್ ವಿಮಾನಗಳಾದ ಮಿಗ್-27, ಮಿಗ್-21, ಜಾಗ್ವಾರ್ ಹಾಗೂ ಮಿರಾಜ್-2000 ಗಳೂ ಪತನಗೊಂಡಿವೆ.
ಫೆಬ್ರವರಿ ತಿಂಗಳಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಇದ್ದ ಮಿಗ್-21 ವಿಮಾನ ಪಾಕ್ ವಿಮಾನವನ್ನು ಹೊಡೆದುರುಳಿಸಿದಾಗ ಪತನಗೊಂಡಿತ್ತು.
ಇದಕ್ಕೂ ಮುನ್ನ ಜ.28 ರಂದು ಜಾಗ್ವಾರ್ ಉತ್ತರ ಪ್ರದೇಶದ ಕುಶೀನಗರ್ ನಲ್ಲಿ ಪತನಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


