ವಾಯುಪಡೆ ವಿಮಾನ ನಾಪತ್ತೆ; ಶೋಧಕಾರ್ಯ ತೀವ್ರ, ಕಾರ್ಯಾಚರಣೆಗೆ P-8I ನೌಕಾ ವಿಚಕ್ಷಣ ವಿಮಾನ ನಿಯೋಜನೆ
ಭಾರತೀಯ ವಾಯುಪಡೆಯ ಎಎನ್–32 ವಿಮಾನ ನಾಪತ್ತೆಯಾಗಿ ನಾಲ್ಕು ದಿನ ಕಳೆದಿದ್ದು, ವಿಮಾನದ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

Published On :
ನವದೆಹಲಿ: ಭಾರತೀಯ ವಾಯುಪಡೆಯ ಎಎನ್–32 ವಿಮಾನ ನಾಪತ್ತೆಯಾಗಿ ನಾಲ್ಕು ದಿನ ಕಳೆದಿದ್ದು, ವಿಮಾನದ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಇದೀಗ ಶೋಧ ಕಾರ್ಯಾತಚರಣೆ ಸತತ ಐದನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಯಾಚರಣೆಗೆ ಇದೀಗ ನೌಕಾದಳದ ಐಎನ್ ಎಸ್ ರಾಜಾಲಿ ಮತ್ತು ಅದರ P-8I ನೌಕಾ ವಿಚಕ್ಷಣ ವಿಮಾನವನ್ನು ಕೂಡ ನಿಯೋಜನೆ ಮಾಡಲಾಗಿದೆ. ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಉಪಗ್ರಹಗಳ ಮೂಲಕ ವಿಮಾನದ ಪತ್ತೆಗೆ ಯತ್ನಿಸುತ್ತಿದೆ. ಅಂತೆಯೇ ವಾಯುಪಡೆಯ ಹಲವು ಯುದ್ಧ ವಿಮಾನಗಳು ಹಾಗೂ ವಿಚಕ್ಷಣ ವಿಮಾನಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇದೀಗ ಕಾರ್ಯಾಚರಣೆಗೆ ನೌಕಾದಳ ಕೂಡ ಕೈ ಜೋಡಿಸಿದ್ದು, ನೌಕಾದಳದ ಐಎನ್ ಎಸ್ ರಾಜಾಲಿ ಮತ್ತು ಅದರ P-8I ನೌಕಾ ವಿಚಕ್ಷಣ ವಿಮಾನ ಶೋಧ ಕಾರ್ಯಾಚರಣೆಗೆ ಧಾವಿಸಿವೆ.
ಕಾರ್ಯಾಚರಣೆಗೆ ಪ್ರತೀಕೂಲ ಹವಾಮಾನ ಅಡ್ಡಿ
ಇನ್ನು ನಾಪತ್ತೆಯಾಗಿರುವ ವಿಮಾನ ಶೋಧಕ್ಕೆ ಪ್ರತೀಕೂಲ ಹವಾಮಾನ ಅಡ್ಡಿಯಾಗಿದ್ದು, ಈ ಬಗ್ಗೆ ವಾಯುಸೇನೆ ಮಾಹಿತಿ ನೀಡಿದೆ. '100 ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದೇವೆ. ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಪತ್ತೆಗಾಗಿ ಸಾಧ್ಯವಿರುವ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಯುದ್ಧ ವಿಮಾನ, ಸಿ130, ಹೆಲಿಕಾಪ್ಟರ್ ಗಳು, ವಿಶೇಷ ಸೆನ್ಸಾರ್ ಗಳು, ಉಪಗ್ರಹ ನೆರವು ಹಾಗೂ ನಾಗರಿಕ, ಪೊಲೀಸ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ನೆರವನ್ನು ಪಡೆದು ಹುಡುಕಾಟ ನಡೆಸಲಾಗುತ್ತಿದೆ. ಪ್ರತೀಕೂಲ ಹಮಾಮಾನದಿಂದ ಅಡ್ಡಿಯಾಗುತ್ತಿದೆ ಎಂದು ತಿಳಿಸಿದೆ.
ಕಾಣೆಯಾದ ವಿಮಾನದ ಪತ್ತೆ ಕಾರ್ಯದ ಯಾವ ಪ್ರಯತ್ನವನ್ನು ನಾವು ನಿಲ್ಲಿಸಿಲಲ್ಲ. ಶುಕ್ರವಾರ ಹವಾಮಾನ ಸ್ವಲ್ಪಮಟ್ಟಿಗೆ ಅನುಕೂಲಕರವಾಗಲಿದ್ದು, ಭಾರತೀಯ ನೌಕಾಪಡೆಯ ಪಿ8ಐ ವಿಮಾನ ಹುಡುಕಾಟ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.
ವಿಮಾನ ಸೋಮವಾರ ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾದತ್ತ ಹೊರಟಿದ್ದಾಗ ನಾಪತ್ತೆಯಾಗಿದೆ. ಅಂದು ಮಧ್ಯಾಹ್ನ 12.25ಕ್ಕೆ ಜೋರ್ಹಾಟ್ ವಾಯುನೆಲೆಯಿಂದ ಹೊರಟಿದ್ದ ವಿಮಾನ 1 ಗಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತ್ತು. ಭಾರತೀಯ ವಾಯಸೇನೆಯ 13 ಮಂದಿ ವಿಮಾನದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiISROಇಸ್ರೋIndian Air ForceBay of Bengalಭಾರತೀಯ ವಾಯುಸೇನೆಬಂಗಾಳಕೊಲ್ಲಿAntonov AN 32ಆ್ಯಂಟನೋವ್ ಎಎನ್ 30 ಜೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


