ಮತ್ತೆ ವಕ್ಕರಿಸಿದ 'ನಿಪಾಹ್' ಮಹಾಮಾರಿ, ಕೇರಳದಲ್ಲಿ ವೈರಾಣು ಸೋಂಕಿತ ಮೊದಲ ವ್ಯಕ್ತಿ ಪತ್ತೆ
ದೇವರನಾಡು ಕೇರಳದಲ್ಲಿ ಮಹಾಮಾರಿ ನಿಪಾಹ್ ಮತ್ತೆ ವಕ್ಕರಿಸಿದ್ದು, 23 ವರ್ಷದ ವ್ಯಕ್ತಿ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

Published On :
ಕೊಚ್ಚಿ: ದೇವರನಾಡು ಕೇರಳದಲ್ಲಿ ಮಹಾಮಾರಿ ನಿಪಾಹ್ ಮತ್ತೆ ವಕ್ಕರಿಸಿದ್ದು, 23 ವರ್ಷದ ವ್ಯಕ್ತಿ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.
ಕೇರಳದ ಎರ್ನಾಕುಲಂ ಮೂಲದ ವ್ಯಕ್ತಿ ಕಳೆದ ವಾರ ತೀವ್ರ ಜ್ವರದಿಂದ ಬಳಲುತ್ತಿದ್ದ. ಆತನನ್ನು ಕೂಡಲೇ ಆಸ್ಪತ್ರೆ ದಾಖಲು ಮಾಡಲಾಗಿತ್ತು, ಆತನಲ್ಲಿನ ಲಕ್ಷಣಗಳನ್ನು ಗುರುತಿಸಿದ್ದ ವೈದ್ಯರು ನಿಪಾಹ್ ಸೋಂಕು ಇರಬಹುದು ಶಂಕಿಸಿದ್ದರು. ಹೀಗಾಗಿ ಅತನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಗೆ ಕಳುಹಿಸಿದ್ದರು. ಇದೀಗ ಈ ರಕ್ತದ ಮಾದರಿಯ ವರದಿ ಬಂದಿದ್ದು, ವ್ಯಕ್ತಿಗೆ ನಿಪಾಹ್ ವೈರಾಣು ತಗುಲಿರುವುದು ವರದಿಯಿಂದ ಸ್ಪಷ್ಟವಾಗಿದೆ.
ಹೀಗಾಗಿ ಸೊಂಕಿತನನ್ನು ವಿಶೇಷ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


