ದೇಶ

ಪೊಲೀಸ್ ಠಾಣೆಯಲ್ಲೇ ಟಿಕ್ ಟಾಕ್ ವಿಡಿಯೋದಲ್ಲಿ ಸೊಂಟ ಬಳುಕಿಸಿದ ಮಹಿಳಾ ಪೇದೆ, ಕೆಲಸಕ್ಕೆ ಕುತ್ತು!

ಟಿಕ್ ಟಾಕ್ ವಿಡಿಯೋಗಳನ್ನು ಮಾಡಲು ಹೋಗಿ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ಗುಂಗಿಗೆ ಬಿದ್ದು ಪೊಲೀಸ್...

ಪೊಲೀಸ್ ಠಾಣೆಯಲ್ಲೇ ಟಿಕ್ ಟಾಕ್ ವಿಡಿಯೋದಲ್ಲಿ ಸೊಂಟ ಬಳುಕಿಸಿದ ಮಹಿಳಾ ಪೇದೆ, ಕೆಲಸಕ್ಕೆ ಕುತ್ತು!
ಅರ್ಪಿತಾ ಚೌಧರಿ
Published On :
ಚಂಢಿಗಡ್: ಟಿಕ್ ಟಾಕ್ ವಿಡಿಯೋಗಳನ್ನು ಮಾಡಲು ಹೋಗಿ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ಗುಂಗಿಗೆ ಬಿದ್ದು ಪೊಲೀಸ್ ಠಾಣೆಯಲ್ಲೇ ವಿಡಿಯೋ ಮಾಡಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾರೆ.
ಗುಜರಾತ್ ನ ಮೆಹ್ಸಾನ್ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಪಿತಾ ಚೌಧರಿ ಟಿಕ್ ಟಾಕ್ ವಿಡಿಯೋ ಇತ್ತೀಚೆಗೆ ಹರಿದಾಡಿಟ್ಟು ಇದನ್ನು ಗಮನಿಸಿದ ಅಧಿಕಾರಿಗಳು ಅರ್ಪಿತಾರನ್ನು ಅಮಾನತು ಮಾಡಿದ್ದಾರೆ. 
ಕರ್ತವ್ಯ ನಿರತ ಸಂದರ್ಭದಲ್ಲಿ ಸಮವಸ್ತ್ರ ಧರಿಸದೆ ಪೊಲೀಸ್ ಠಾಣೆಯಲ್ಲೇ ಅರ್ಪಿತಾ ಸೊಂಟ ಬಳುಕಿಸಿ ಟಿಕ್ ಟಾಕ್ ವಿಡಿಯೋ ಮಾಡಿರುವುದು ಹಿರಿಯ ಅಧಿಕಾರಿಗಳ ಕಂಗೆಣ್ಣಿಗೆ ಗುರಿಯಾಗಿತ್ತು. 
2016ರಲ್ಲಿ ಪೊಲೀಸರ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದರು. 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಇದೇ ಜುಲೈ 20ರಂದು ಅರ್ಪಿತಾ ಟಿಕ್ ಟಾಕ್ ವಿಡಿಯೋ ಮಾಡಿ ಅದನ್ನು ವಾಟ್ಸ್ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.