ಅನೈತಿಕ ಸಂಬಂಧ ಶಂಕೆ: ಮಾಡೆಲ್ ಮುಖ ಕಲ್ಲಿನಿಂದ ಜಜ್ಜಿ ಪ್ರಿಯಕರನಿಂದಲೇ ಭೀಕರ ಕೊಲೆ!
ಪ್ರೀತಿಯ ಗುಂಗಿನಲ್ಲಿ ಮುಳುಗಿದ್ದ ಪ್ರಿಯಕರನೊಬ್ಬ ತನ್ನ ಪ್ರಿಯತಮೆ ಜೊತೆ ಮದುವೆಯಾಗಿ ಬಾಳು ಕಟ್ಟಿಕೊಳ್ಳಬೇಕೆಂಬ ಕನಸಿನಲ್ಲಿದ್ದ. ಆದರೆ ತನ್ನ ಪ್ರೇಯಸಿ...

Published On :
ನಾಗಪುರ: ಪ್ರೀತಿಯ ಗುಂಗಿನಲ್ಲಿ ಮುಳುಗಿದ್ದ ಪ್ರಿಯಕರನೊಬ್ಬ ತನ್ನ ಪ್ರಿಯತಮೆ ಜೊತೆ ಮದುವೆಯಾಗಿ ಬಾಳು ಕಟ್ಟಿಕೊಳ್ಳಬೇಕೆಂಬ ಕನಸಿನಲ್ಲಿದ್ದ. ಆದರೆ ತನ್ನ ಪ್ರೇಯಸಿ ಇನ್ನೊಬ್ಬನೊಂದಿಗೆ ಚಕ್ಕಂದವಾಡುತ್ತಿದ್ದಾಳೆನೋ ಎಂಬ ಅನುಮಾನದ ಮೇಲೆ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಮಹಾರಾಷ್ಟ್ರದ ನಾಗಪುರದ ನಿವಾಸಿ ಅಶ್ರಫ್ ಶೇಕ್ ಮಾಡೆಲ್ ಖುಷಿ ಪರಿಹಾರ್ ಳನ್ನು ಪ್ರೀತಿಸುತ್ತಿದ್ದ. ಇನ್ನೇನು ಮದುವೆಯಾಗಬೇಕು ಎಂದುಕೊಂಡಿದ್ದ ಅಶ್ರಫ್ ಗೆ ಖುಷಿ ಮೇಲೆ ಅನುಮಾನ ಬಂದಿದೆ. ಆಕೆಯ ವರ್ತನೆ ಬದಲಾಗಿದ್ದಕ್ಕೆ ಮೊದಲಿಗೆ ಅಶ್ರಫ್ ಆಕ್ಷೇಪಿಸುತ್ತಾ ಬಂದಿದ್ದ ಇದರಿಂದ ಇಬ್ಬರ ನಡುವೆ ಸದಾ ಜಗಳವಾಗುತ್ತಿತ್ತು.
ಆದರೆ ಶನಿವಾರ ಮಾತ್ರ ಖುಷಿಗೆ ಕೊನೆಯ ದಿನವಾಗಿತ್ತು. ಜಗಳದ ನಂತರ ಇಬ್ಬರು ಸುಮ್ಮನಾಗಿದ್ದಾರೆ. ಬಳಿಕ ಕಾರಿನಲ್ಲಿ ಇಬ್ಬರು ತೆರಳಿದ್ದಾರೆ. ಪಂಡುರ್ನಾ-ನಾಗ್ಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಾವ್ಲಿ ಫತಾ ಎಂಬ ನಿರ್ಜನ ಪ್ರದೇಶದಲ್ಲಿ ಅಶ್ರಫ್ ಕಾರು ನಿಲ್ಲಿಸಿದ್ದಾನೆ.
ಬಳಿಕ ಆಕೆಯ ಜೊತೆ ಮತ್ತೆ ಜಗಳವಾಡಿ ಆಕೆಯನ್ನು ಕೆಳಕ್ಕೆ ಕೆಡವಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆ ಮಾಡಿ ಬಂದಿದ್ದಾನೆ. ನಂತರ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಮಹಿಳೆ ಖುಷಿ ಮಾಡೆಲ್ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಅಶ್ರಫ್ ನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


