ಮೋದಿ ಸರ್ಕಾರ ಸುಮಾರು 600 ಮುಸ್ಲಿಮರಿಗೆ ಪೌರತ್ವ ನೀಡಿದೆ: ಕೇಂದ್ರ ಸಚಿವ
ಹೊಸ ಪೌರತ್ವ ಕಾಯ್ದೆಯ ಬಗ್ಗೆ ತೀವ್ರ ಚರ್ಚೆಯ ನಡುವೆ, ಹೊಸದಾಗಿ ಜಾರಿಗೆ ಬಂದ ಕಾನೂನು ಮಾನವೀಯ ಮೌಲ್ಯಗಳನ್ನು ದೃಢಪಡಿಸುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿ: ಹೊಸ ಪೌರತ್ವ ಕಾಯ್ದೆಯ ಬಗ್ಗೆ ತೀವ್ರ ಚರ್ಚೆಯ ನಡುವೆ, ಹೊಸದಾಗಿ ಜಾರಿಗೆ ಬಂದ ಕಾನೂನು ಮಾನವೀಯ ಮೌಲ್ಯಗಳನ್ನು ದೃಢಪಡಿಸುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸುಮಾರು 600 ಮುಸ್ಲಿಮರಿಗೆ ಪೌರತ್ವ ನೀಡಿದೆ ಎಂದು ಅವರು ತಿಳಿಸಿದ್ದಾರೆ.
"ಆಧುನಿಕ ಭಾರತದಲ್ಲಿ, ಟಿಬೆಟ್, ಶ್ರೀಲಂಕಾ, ಉಗಾಂಡಾ ಅಥವಾ ಬಾಂಗ್ಲಾದೇಶದ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಸಿಎಎ ಮಾನವ ಹಕ್ಕುಗಳ ಬಗೆಗಿನ ಈ ಬದ್ಧತೆಯನ್ನು ಬದಲಿಸುವುದಿಲ್ಲ, ಬದಲಾಗಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವವರಾಗಿ ಭಾರತದ ಸ್ಥಾನವನ್ನು ಇದು ಪುನರುಚ್ಚರಿಸುತ್ತದೆ" ಎಂದು ಸರಣಿ ಟ್ವೀಟ್‍ನಲ್ಲಿ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
"ಈ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಅರ್ಥವಲ್ಲ - ವಾಸ್ತವವಾಗಿ, ಕಳೆದ ಐದು ವರ್ಷಗಳಲ್ಲಿ, ಪಿಎಂ ಮೋದಿಯವರ ಸರ್ಕಾರವು ಈ ದೇಶಗಳ ಸುಮಾರು 600 ಮುಸ್ಲಿಮರಿಗೆ ಪೌರತ್ವವನ್ನು ನೀಡಿದೆ. ಸಿಎಎ ಭಾರತದ ಜಾತ್ಯತೀತ ರುಜುವಾತುಗಳನ್ನು ಬದಲಾಯಿಸುವುದಿಲ್ಲ ಎಂದು ವಿವರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮ, ಜಾತಿ, ಮತ, ಪಂಥ, ಜನಾಂಗೀಯತೆ ಅಥವಾ ಜನಾಂಗವನ್ನು ಲೆಕ್ಕಿಸದೆ ಯಾವುದೇ ಭಾರತೀಯ ನಾಗರಿಕರ "ಹಕ್ಕುಗಳನ್ನು ಬದಲಾಯಿಸುವುದಿಲ್ಲ. ವಿರೋಧ ಪಕ್ಷಗಳು ಕಾಯ್ದೆ ಕುರಿತು ತಪ್ಪು ಸಂದೇಶ ರವಾನಿಸುತ್ತಿದ್ದು, ಸಾರ್ವಜನಿಕರ ಭಾವನೆಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಮಾಜಿ ರಾಜತಾಂತ್ರಿಕರೂ ಆಗಿರುವ ಹರ್ದೀಪ್ ಸಿಂಗ್ ಪುರಿ, ಮಮತಾ ಬ್ಯಾನರ್ಜಿ ಹಾಗೂ ಇನ್ನಿತರ ರಾಜಕೀಯ ಮುಖಂಡರನ್ನು ಟೀಕಿಸುತ್ತಾ, ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಸುಳ್ಳು ನಿರೂಪಣೆ ಮಾಡುತ್ತಾ, ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಯ ನಾಶದಂತಹ ಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರಚೋದಿಸಿದ್ದಾರೆ. ಪೊಲೀಸರ ಮೇಲೂ ದಾಳಿ ಮಾಡಲಾಗಿದೆ, ಇನ್ನೂ ಕೆಲವರು ವಿದೇಶಿ ಹಸ್ತಕ್ಷೇಪವನ್ನು ಆಹ್ವಾನಿಸುವ ಮಟ್ಟಕ್ಕೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


