ಕೇಜ್ರಿವಾಲ್ ಏಕೆ ತಮ್ಮ ಟ್ರೇಡ್ ಮಾರ್ಕ್ ಮಫ್ಲರ್ ಧರಿಸುತ್ತಿಲ್ಲ? ದೆಹಲಿ ಸಿಎಂ ಏನಂದ್ರು ಗೊತ್ತಾ!
ರಾಷ್ಟ್ರ ರಾಜಧಾನಿ ದೆಹಲಿಯ ಜನರು ವಿಪರೀತ ಚಳಿಯಿಂದ ತತ್ತರಿಸಿ ಹೋಗಿರುವಂತೆ 'ಮಫ್ಲರ್ ಮ್ಯಾನ್' ಅಂತಲೇ ಬಿರುದು ತಂದುಕೊಟ್ಟಿದ್ದ ಟ್ರೇಡ್ ಮಾರ್ಕ್ ಮಫ್ಲರ್ ನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧರಿಸುತ್ತಿಲ್ಲವೇಕೆ? ಎಂದು ಟ್ವಿಟಿಗರು ಪ್ರಶ್ನಿಸಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನರು ವಿಪರೀತ ಚಳಿಯಿಂದ ತತ್ತರಿಸಿ ಹೋಗಿರುವಂತೆ 'ಮಫ್ಲರ್ ಮ್ಯಾನ್' ಅಂತಲೇ ಬಿರುದು ತಂದುಕೊಟ್ಟಿದ್ದ ಟ್ರೇಡ್ ಮಾರ್ಕ್ ಮಫ್ಲರ್ ನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧರಿಸುತ್ತಿಲ್ಲವೇಕೆ? ಎಂದು ಟ್ವಿಟಿಗರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಬಹಳ ಹಿಂದೆಯೇ ಮಫ್ಲರ್ ನ್ನು ತೆಗೆದುಕೊಂಡಿದ್ದೇನೆ. ಆದರೆ, ನೀವು ಗಮನಿಸಿಲ್ಲ ಅಷ್ಟೇ. ಬಹಳ ಚಳಿಯಿದೆ. ಎಲ್ಲರೂ ಕಾಳಜಿ ವಹಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಆರಂಭಿಕ ದಿನಗಳಲ್ಲಿ ಮಫ್ಲರ್ ನ್ನು ಕೇಜ್ರಿವಾಲ್ ಅವರ ರಾಜಕೀಯ ಎದುರಾಳು ಅಪಹಾಸ್ಯ ಮಾಡಲು ಬಳಸುತ್ತಿದ್ದರು. ಆದರೆ, ಆದನ್ನೇ ಅಸ್ತ್ರ ಮಾಡಿಕೊಂಡಿದ್ದ ಎಎಪಿ ಹಾಗೂ ಅದರ ಮುಖ್ಯಸ್ಥ ಕೇಜ್ರಿವಾಲ್ ' 2015ರಲ್ಲಿ ಮಫ್ಲರ್ ಮ್ಯಾನ್ ವಾಪಾಸ್ ಎಂಬ ಘೋಷಣೆಯಡಿ ಪ್ರಚಾರ ನಡೆಸುವ ಮೂಲಕ 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.
ಚಳಿಗಾಲದ ಸಂದರ್ಭದಲ್ಲಿ ಈ ಹಿಂದೆ ಅನೇಕ ಬಾರಿ ಟ್ವಿಟರ್ ನಲ್ಲಿ ಮಫ್ಲರ್ ಮ್ಯಾನ್ ಹ್ಯಾಷ್ ಟಾಗ್ ಟ್ರೆಂಡಿಂಗ್ ಆಗುತಿತ್ತು. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 'ಅಚ್ಚೆ ಬೀಟೆ ಪಾಂಚ್ ಸಾಲ್ ಲಾಗೆ ರಾಹೊ ಕೇಜ್ರಿವಾಲ್ ' ಎಎಪಿಯ ಈ ಬಾರಿಯ ಘೋಷ ವಾಕ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


