ದೇಶ

ಪೌರತ್ವ ಕಾಯ್ದೆ, ಎನ್ ಆರ್ ಸಿ ಅನಿಶ್ಚಿತತೆ ನೆರೆ ರಾಷ್ಟ್ರಗಳ ಮೇಲೆ ಪರಿಣಾಮ: ಬಾಂಗ್ಲಾದೇಶ 

ಪೌರತ್ವ ಕಾಯ್ದೆ, ಎನ್ ಆರ್ ಸಿ ಭಾರತದ ಆಂತರಿಕ ವಿಷಯಗಳೇ ಆಗಿದ್ದರೂ ಅದು ನೆರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಹೇಳಿದ್ದಾರೆ.

ಪೌರತ್ವ ಕಾಯ್ದೆ, ಎನ್ ಆರ್ ಸಿ ಅನಿಶ್ಚಿತತೆ ನೆರೆ ರಾಷ್ಟ್ರಗಳ ಮೇಲೆ ಪರಿಣಾಮ: ಬಾಂಗ್ಲಾದೇಶ 
ಪೌರತ್ವ ಕಾಯ್ದೆ, ಎನ್ ಆರ್ ಸಿ ಅನಿಶ್ಚಿತತೆ ನೆರೆ ರಾಷ್ಟ್ರಗಳ ಮೇಲೆ ಪರಿಣಾಮ: ಬಾಂಗ್ಲಾದೇಶ
Published On :

ಢಾಕಾ: ಪೌರತ್ವ ಕಾಯ್ದೆ, ಎನ್ ಆರ್ ಸಿ ಭಾರತದ ಆಂತರಿಕ ವಿಷಯಗಳೇ ಆಗಿದ್ದರೂ ಅದು ನೆರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಹೇಳಿದ್ದಾರೆ. 

ಈ ಕಾಯ್ದೆ ಹಾಗೂ ಎನ್ ಆರ್ ಸಿಯಿಂದ ದೇಶದಲ್ಲಿ ಉಂಟಾಗುವ ಅಸ್ಥಿರತೆ ನೆರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ್ದು, ಯಾವುದೆ ಪರಿಸ್ಥಿತಿಯಲ್ಲಿಯೂ ಸಹ ಬಾಂಗ್ಲಾದೇಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭರವಸೆ ನೀಡಿದ್ದಾರೆಂದು ಮೊಮೆನ್ ಹೇಳಿದ್ದು, ಭಾರತವನ್ನು ನಂಬುವುದಾಗಿ ತಿಳಿಸಿದ್ದಾರೆ. 

ನಾವು ಭಾರತದ ನಂ.1 ಮಿತ್ರ ರಾಷ್ಟ್ರ. ಅಲ್ಲೇನಾದರೂ ಅಸ್ಥಿರತೆ, ಅನಿಶ್ಚಿತತೆ ಉಂಟಾದರೆ ಅದು ನಮ್ಮ ಮೇಲೆಯೂ ಪರಿಣಾಮ ಬೀರಲಿದೆ. ಇದಷ್ಟೇ ನಮ್ಮ ಭಯ ಎಂದು ಅಲ್ಲಿನ  ವಿದೇಶಾಂಗ ಸಚಿವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.