50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳಿಗೆ 'ಅಕಾಲಿಕ ನಿವೃತ್ತಿ'
ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮರ್ಥ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.

ನವ ದೆಹಲಿ: ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮರ್ಥ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.
ಆಗಾಗ್ಗೆ ನಡೆಸುವ ಪರಿಶೀಲನೆಯಲ್ಲಿ ಅಸಮರ್ಥತತೆ, ಅಪರಿಪೂರ್ಣತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ 50 ವರ್ಷಕ್ಕೂ ಮೇಲ್ಪಟ್ಟ 32 ಅಧಿಕಾರಿಗಳಿಗೆ ಅಕಾಲಿಕ ನಿವೃತ್ತಿ ಘೋಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2016-17ರಲ್ಲಿ ಮೊದಲ ಬಾರಿಗೆ ನಾಲ್ಕು ಅಧಿಕಾರಿಗಳಿಗೆ ಇದೇ ರೀತಿಯಲ್ಲಿ ಅಕಾಲಿಕ ನಿವೃತ್ತಿ ನೀಡಲಾಗಿತ್ತು. ನಿರ್ದಿಷ್ಟ ವಯಸ್ಸು ತಲುಪುವವರ ಬಗ್ಗೆ ಆಗಾಗ್ಗೆ ಪರಿಶೀಲನೆ ನಡೆಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಭಾಗವಾಗಿದೆ. ಆದರೆ ಅವರು ಅಕಾಲಿಕವಾಗಿ ನಿವೃತ್ತರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


