ದೇಶ

ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಮಗು: ವಿಡಿಯೋ ವೈರಲ್ 

ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಕೂಸು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ.

ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಮಗು: ವಿಡಿಯೋ ವೈರಲ್ 
ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಮಗು: ವಿಡಿಯೋ ವೈರಲ್
Published On :

ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಕೂಸು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ. 

ದಾಮನ್-ಡಿಯುವಿನಲ್ಲಿ ಈ ಘಟನೆ ವರದಿಯಾಗಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ಈ ದೃಶ್ಯವನ್ನು ಕಂಡು ತಕ್ಷಣವೇ ಆ ಮಗುವನ್ನು ರಕ್ಷಿಸಿದ್ದಾರೆ. ಎಎನ್ಐ ನಲ್ಲಿ ಈ ವಿಡಿಯೋ ಪ್ರಕಟವಾಗಿದ್ದು, ಮಗುವನ್ನು ರಕ್ಷಿಸಲು ಸ್ಥಳೀಯರು ಧಾವಿಸಿರುವ ದೃಶ್ಯ ಸೆರೆಯಾಗಿದೆ. 

ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಮೂರನೇ ಮಹಡಿಯಿಂದ ಬಿದ್ದಿದೆ. ಆದರೆ ಮಧ್ಯದಲ್ಲಿ ಕಿಟಕಿಯ ಸರಳಿಗೆ ಸಿಲುಕಿಕೊಂಡಿದ್ದು, ಅಳಲು ಪ್ರಾರಂಭಿಸಿದೆ. ಇದನ್ನು ಕಂಡ ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ ಆ ಮಗು ಬಿದ್ದರೂ ಯಾವುದೇ ಗಾಯಗಳಾಗದಂತೆ ಎಚ್ಚರ ವಹಿಸಿ ಕಾಪಾಡಿದ್ದಾರೆ. 

ಘಟನೆಯಲ್ಲಿ ಮಗುವಿಗೆ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಮಧ್ಯಪ್ರದೇಶದ ಟಿಕಮಾರ್ಗ್ ನಲ್ಲಿಯೂ ಇದೇ ರೀತಿಯಲ್ಲಿ 3 ವರ್ಷದ ಮಗು 35 ಅಡಿ ಬಾಲ್ಕನಿಯಿಂದ ಬಿದ್ದಿತ್ತು. ಆದರೆ ಇದನ್ನು ಗಮನಿಸಿದ್ದ ಸೈಕಲ್ ರಿಕ್ಷಾ ಚಾಲಕ ಆ ಮಗು ತನ್ನ ಸೈಕಲ್ ರಿಕ್ಷಾ ಮೇಲೆ ಬೀಳುವಂತೆ ಮಾಡಿ ರಕ್ಷಿಸಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.