ಇನ್ಮುಂದೆ ಹಸು ಮತ್ತು ಎಮ್ಮೆಗಳು ಆಧಾರ್‌ಗೆ ಅರ್ಜಿ ಹಾಕ್ಬೋದು!
ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಸಿಕ್ಕ ನಂತರ ಇದೀಗ ಭಾರತದ ಹಸುಗಳು ಮತ್ತು ಎಮ್ಮೆಗಳು ಆಧಾರ್‌ಗೆ ಅರ್ಜಿ ಸಲ್ಲಿಸುವ ಸರದಿ.

Published On :
ನವದೆಹಲಿ: ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಸಿಕ್ಕ ನಂತರ ಇದೀಗ ಭಾರತದ ಹಸುಗಳು ಮತ್ತು ಎಮ್ಮೆಗಳು ಆಧಾರ್‌ಗೆ ಅರ್ಜಿ ಸಲ್ಲಿಸುವ ಸರದಿ.
ಪ್ರಾಣಿಗಳ ಉತ್ಪಾದನೆ ಮತ್ತು ಆರೋಗ್ಯ(ಐಎನ್ಎಪಿಹೆಚ್) ಪ್ರಾಣಿಗಳ ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಐಎನ್ಎಪಿಹೆಚ್ ವಿಶ್ವದ ಅತಿದೊಡ್ಡ ಪ್ರಾಣಿಗಳ ಡೇಟಾಬೇಸ್ ಆಗಿರಲಿದೆ.
ಜನರಿಗೆ ನೀಡಲಾಗಿರುವ ಆಧಾರ್ ಕಾರ್ಡ್ ಗಳಂತೆಯೇ ಐಎನ್ಎಪಿಎಚ್ ಪ್ರತಿ ಪ್ರಾಣಿಗಳಿಗೆ ವಿಶಿಷ್ಠ ಗುರುತಿನ ಸಂಖ್ಯೆಯನ್ನು(ಯುಐಡಿ) ನಿಗದಿಪಡಿಸುತ್ತದೆ. ಮತ್ತು ಗೋ ಸಂತತಿ ಬಗ್ಗೆ ಅಗ್ಯವಿರುವ ಎಲ್ಲ ಮಾಹಿತಿಯ ದಾಖಲೆಗಳನ್ನು ಸಂಗ್ರಹಿಸಿಡಲಾಗುತ್ತದೆ. ಇದೇ ದೇಶದ ಅಪಾರ ಸಂಖ್ಯೆಯ ಜಾನುವಾರುಗಳನ್ನು ನಿರ್ವಹಿಸುವಲ್ಲಿ ಸರ್ಕಾರಕ್ಕೆ ಸಹಾಯವಾಗಲಿದೆ.
ಜಾನುವಾರು ಕಳ್ಳಸಾಗಣೆ ತಡೆಯಲು ಸಂಬಂಧ ಸುಪ್ರೀಂಕೋರ್ಟ್ 2015ರಲ್ಲಿ ಸರ್ಕಾರಿ ಸಮಿತಿಯು ಹಸುಗಳ ಕಳ್ಳಸಾಗಣೆ ತಡೆಗಟ್ಟಲು ಯುಐಡಿಗೆ ಶಿಫಾರಸು ಮಾಡಿತ್ತು.
ಪ್ರತಿ ಪ್ರಾಣಿಗೆ 12 ಸಂಖ್ಯೆಯ ಗುರುತಿನ ಅಂಕಿ ನೀಡಲಾಗುತ್ತದೆ. ಈ ಪ್ರಾಣಿ ಎಲ್ಲೇ ಇದ್ದರೂ ಅದರ ಆರೋಗ್ಯ ಸ್ಥಿತಿ, ಕಾಡಿದ ರೋಗಗಳು, ನೀಡಲಾದ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಇಲಾಖೆಯಲ್ಲಿರುವ ಸರ್ವರ್ ನಲ್ಲಿ ದಾಖಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


