ದೇಶ

ಲಂಕಾ ದಹನ ಆಯ್ತು, ಇದೀಗ ಬೆಂಗಾಲಿಯಲ್ಲಿ ಇಸಿಸ್ 'ಕಮಿಂಗ್ ಸೂನ್' ಪೋಸ್ಟ್, ಭಾರತ ಟಾರ್ಗೆಟ್?

ಏಪ್ರಿಲ್ 21 ಈಸ್ಟರ್ ಭಾನುವಾರದಂದ ಇಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಅಮಾಯಕರ ರಕ್ತಪಾತ ಹರಿಸಿದ್ದರು. ಇದೀಗ ಬೆಂಗಾಲಿ ಭಾಷೆಯಲ್ಲಿ ಇಸಿಸ್...

ಲಂಕಾ ದಹನ ಆಯ್ತು, ಇದೀಗ ಬೆಂಗಾಲಿಯಲ್ಲಿ ಇಸಿಸ್ 'ಕಮಿಂಗ್ ಸೂನ್' ಪೋಸ್ಟ್, ಭಾರತ ಟಾರ್ಗೆಟ್?
ಸಂಗ್ರಹ ಚಿತ್ರ
Published On :
ನವದೆಹಲಿ: ಏಪ್ರಿಲ್ 21 ಈಸ್ಟರ್ ಭಾನುವಾರದಂದ ಇಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಅಮಾಯಕರ ರಕ್ತಪಾತ ಹರಿಸಿದ್ದರು. ಇದೀಗ ಬೆಂಗಾಲಿ ಭಾಷೆಯಲ್ಲಿ ಇಸಿಸ್ ಉಗ್ರರು ಕಮಿಂಗ್ ಸೂನ್ ಎಂದು ಪೋಸ್ಟ್ ಮಾಡಿದ್ದು ಈ ಭಾರತ ಅವರ ಟಾರ್ಗೆಟ್ ಭಾರತ ಎಂದು ಹೇಳಲಾಗುತ್ತಿದೆ.
ಬೆಂಗಾಲಿಯಲ್ಲಿ ಶಿಗ್ರೋಯ್ ಆಶ್ಚೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗಂದರೆ ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎಂದು ಅರ್ಥ. ಅದಾಗಲೇ ಇಸಿಸ್ ಬಾಂಗ್ಲಾದೇಶದಲ್ಲಿ ನೆಲೆಯೂರಿದ್ದು ಅಲ್ಲಿನ ಯುವಕರ ಮನಪರಿವರ್ತನೆಯಲ್ಲಿ ತೊಡಗಿದ್ದು ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ. 
ಬಾಂಗ್ಲಾದೇಶ ಪಶ್ಟಿಮ ಬಂಗಾಳಕ್ಕೆ ಹೊಂದಿಕೊಂಡಿರುವುದರಿಂದ ಈ ಗಡಿಯ ಮೂಲಕ ಭಾರತಕ್ಕೆ ಇಸಿಸ್ ಉಗ್ರರು ನುಸುಳಲು ಸಾಧ್ಯತೆಯೂ ಇದೆ ಎನ್ನಲಾಗಿದೆ. 
ಸದ್ಯ ಇಸಿಸ್ ನ ಟೆಲಿಗ್ರಾಮ್ ಚಾನೆಲ್ ನಲ್ಲಿ ಪ್ರಸಾರವಾಗಿರುವ ಪೋಸ್ಟ್ ನ ಕುರಿತಾಗಿ ತನಿಖೆ ಆರಂಭವಾಗಿದ್ದು ಈ ಪೋಸ್ಟರ್ ನಲ್ಲಿ ಅಲ್-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.