ದೇಶ

ನಾಥುರಾಂ ಗೊಡ್ಸೆ ಬದುಕಿದ್ದಿದ್ದರೆ ಆತನಿಗೆ ಬಿಜೆಪಿ ಟಿಕೆಟ್ ನೀಡ್ತಿತ್ತು: ಕಾಂಗ್ರೆಸ್

ಮಲೇಗಾಂವ್ ಸ್ಫೋಟದ ಆರೋಪಿಯಾಗಿದ್ದ ಸಾಧ್ವಿ ಪ್ರಗ್ಯಾ ಠಾಕೂರ್ ಅವರಿಗೆ ಬಿಜೆಪಿ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿ ಬೆಂಬಲಿಸಿದ್ದು ಇನ್ನು ಮಹಾತ್ಮಾ ಗಾಂಧಿಜೀ...

ನಾಥುರಾಂ ಗೊಡ್ಸೆ ಬದುಕಿದ್ದಿದ್ದರೆ ಆತನಿಗೆ ಬಿಜೆಪಿ ಟಿಕೆಟ್ ನೀಡ್ತಿತ್ತು: ಕಾಂಗ್ರೆಸ್
ಕಾಂಗ್ರೆಸ್
Published On :
ಕಲ್ಯಾಣ್: ಮಲೇಗಾಂವ್ ಸ್ಫೋಟದ ಆರೋಪಿಯಾಗಿದ್ದ ಸಾಧ್ವಿ ಪ್ರಗ್ಯಾ ಠಾಕೂರ್ ಅವರಿಗೆ ಬಿಜೆಪಿ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿ ಬೆಂಬಲಿಸಿದ್ದು ಇನ್ನು ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಂ ಗೊಡ್ಸೆ ಏನಾದರೂ ಬದುಕಿದ್ದಿದ್ದರೆ ಆತನಿಗೆ ಬಿಜೆಪಿ ಟಿಕೆಟ್ ನೀಡುತ್ತಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಮಹಾರಾಷ್ಟ್ರದ ಕಲ್ಯಾಣದಲ್ಲಿ ಮಾತನಾಡಿದ ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸಚಿನ್ ಸಾವಂತ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಧ್ವಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದರು. 
ಅಲ್ಲದೆ ಡಾ. ನರೇಂದ್ರ ದಾಬೋಲ್ಕರ್, ಎಂಎಂ ಕಲಬುರಗಿ, ಗೋವಿಂದ ಪನ್ಸಾರೆ ಮತ್ತು ಗೌರಿ ಲಂಕೇಶ್ ರನ್ನು ಹತ್ಯೆ ಮಾಡಿದವರಿಗೂ ಬಿಜೆಪಿ ಟಿಕೆಟ್ ನೀಡುತ್ತಿತ್ತು ಎಂದು ಹೇಳಿದ್ದಾರೆ. 
ಮುಂಬೈ ದಾಳಿಯಲ್ಲಿ ಹುತಾತ್ಮರಾದ  ಮಹಾರಾಷ್ಟ್ರ ಎ.ಟಿ.ಎಸ್‌. ಮುಖ್ಯಸ್ಥ ಹೇಮಂತ ಕರ್ಕರೆ ಅವರಿಗೆ ನಾನು ಶಾಪ ಹಾಕಿದ್ದೆ. ನನ್ನ ಶಾಪದಿಂದ ಹಾಗೂ ಅವರ ಕರ್ಮದಿಂದ ಮೃತಪಟ್ಟಿದ್ದಾರೆ ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ಸಾವಂತ್ ದೇಶಕ್ಕಾಗಿ ಮಡಿವರ ಕುರಿತು ಅವಹೇಳನವಾಗಿ ಮಾತನಾಡುತ್ತಾರೆ ಅಂತಹವರಿಗೆ ಮತ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇಳುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.