Pragya Singh Thakur

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ದೇವಾಲಯದ ಹೊರಗೆ ಹಿಂದೂಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ: ಪ್ರಜ್ಞಾ ಠಾಕೂರ್
ದುರ್ಗಾ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ಹಿಂದೂಯೇತರರು ದೇವಾಲಯಗಳ ಹೊರಗೆ ಪ್ರಸಾದ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅವರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸುವ ಮೂಲಕ ಪಾಠ ಕಲಿಸಬೇಕು ಎಂದು ಹೇಳಿದರು.

ಮಾಲೆಗಾಂವ್ ಸ್ಫೋಟ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಿಶೇಷ ನ್ಯಾಯಾಲಯ ವಾರಂಟ್ ಜಾರಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ವಾರೆಂಟ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ನಿಬಂಧನೆಗಳ ಅಡಿಯಲ್ಲಿ ಠಾಕೂರ್ ಮತ್ತು ಇತರ ಆರು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.

ನಮಗೆ ಜೀವ ನೀಡುವುದೂ ಗೊತ್ತು- ಜೀವ ತೆಗೆಯುವುದೂ ಗೊತ್ತು: ಪ್ರಜ್ಞಾ ಸಿಂಗ್
ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಪ್ರಜ್ಞಾ ಠಾಕೂರ್ 'ಗೋಮೂತ್ರ' ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ: ಕೇಂದ್ರ ಸಚಿವರಿಗೆ ಕಾಂಗ್ರೆಸ್ ಶಾಸಕ ಪತ್ರ
ಕೊರೋನಾ ವಿರುದ್ಧದ 'ಗೋಮೂತ್ರ' ದ ಸಂರಕ್ಷಣೆ ಬಗ್ಗೆ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಂತೆ ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಮನವಿ ಮಾಡಿದ್ದಾರೆ.

ನಾನು ಗೋಮೂತ್ರ ಸೇವಿಸುವುದರಿಂದ ನನಗೆ ಕೊರೋನಾ ಬಂದಿಲ್ಲ: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್
ಗೋಮೂತ್ರದ ಸಾರ ಶ್ವಾಸಕೋಶದ ಸೋಂಕು ಮತ್ತು ಕೊರೋನಾವೈರಸ್ ವಿರುದ್ಧ ರಕ್ಷಣೆ ನೀಡಬಲ್ಲದು ಎಂದು ಭೋಪಾಲ್ ಬಿಜೆಪಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ಪ್ರಜ್ಞಾ ಸಿಂಗ್ ಠಾಕೂರ್ ಗೆ ಅನಾರೋಗ್ಯ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಕುಸಿದು ಬಿದ್ದ ಭೋಪಾಲ್ ಸಂಸದೆ
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಾರ್ಯಕ್ರಮವೊಂದರಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಕುಸಿದು ಬಿದ್ದಿದ್ದಾರೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಉದ್ಘಾಟನೆಗೆ ಆಗಮಿಸಿದ್ದ ಸಂಸದೆ ಪ್ರಜ್ಞಾ ಸಿಂಗ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಪ್ರಜ್ಞಾ ಸಿಂಗ್ ಠಾಕೂರ್ ಕ್ಯಾನ್ಸರ್ ಗೆ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ನಾಪತ್ತೆ ಪೋಸ್ಟರ್‌ಗಳಿಗೆ ಬಿಜೆಪಿ ಪ್ರತಿಕ್ರಿಯೆ
ಭೋಪಾಲ್ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ "ಕಾಣೆಯಾಗಿದ್ದಾರೆ" ಎಂದು ಹಲವೆಡೆಗಳಲ್ಲಿ ಪೋಸ್ಟರ್ ಗಳು, ಬ್ಯಾನರ್ ಗಳು ರಾರಾಜಿಸಿದ್ದ ಬೆನ್ನಲ್ಲೇ ಪ್ರಜ್ಞಾ ಸಿಂಗ್ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಗೋಡ್ಸೆ ದೇಶಭಕ್ತ ಹೇಳಿಕೆ: ಷರತ್ತುಬದ್ಧ ಕ್ಷಮೆಯಾಚಿಸಿದ ಪ್ರಗ್ಯಾ ಸಿಂಗ್ ಠಾಕೂರ್, ರಾಹುಲ್ ಗಾಂಧಿ ಹೇಳಿಕೆಗೆ ಆಕ್ಷೇಪ
ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ಮತ್ತು ಪಕ್ಷದಿಂದ ಶಿಸ್ತುಕ್ರಮ ಎದುರಿಸಿದ ನಂತರ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಶುಕ್ರವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ.

