ದೇಶ

ಮತ್ತೆ ಫೈಟರ್ ಜೆಟ್ ಏರಲಿರುವ ಅಭಿನಂದನ್ ವರ್ತಮಾನ್

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸಧ್ಯದಲ್ಲೇ ಮತ್ತೆ ಫೈಟರ್ ಜೆಟ್ ಏರಿ ಸಾಹಸ ಮೆರೆಯಲು ಅಣಿಯಾಗುತ್ತಿದ್ದಾರೆ. ಇದಾಗಲೇ ರಜೆಯ ಮ್ಲಿದ್ದರೂ ಶ್ರೀನಗರದ....

ಮತ್ತೆ ಫೈಟರ್ ಜೆಟ್ ಏರಲಿರುವ ಅಭಿನಂದನ್ ವರ್ತಮಾನ್
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್
Published On :
ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸಧ್ಯದಲ್ಲೇ ಮತ್ತೆ ಫೈಟರ್ ಜೆಟ್ ಏರಿ ಸಾಹಸ ಮೆರೆಯಲು ಅಣಿಯಾಗುತ್ತಿದ್ದಾರೆ. ಇದಾಗಲೇ ರಜೆಯ ಮ್ಲಿದ್ದರೂ ಶ್ರೀನಗರದ ತನ್ನ ಸಹೋದ್ಯೋಗಿಗಳ ಜತೆಗೇ ಇರುವ ಅಭಿನಂದನ್ ಬೆಂಗಳೂರು ಮೂಲದ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಅಂತಿಮ ಅನುಮತಿಯ ನಂತರ ಶೀಘ್ರದಲ್ಲೇ  ವಾಯುಸೇನೆ ಪೈಲಟ್ ಹುದ್ದೆಗೆ ಮರಳ್ಲಿದ್ದಾರೆ.
35 ವರ್ಷ ವಯಸ್ಸಿನ ಐಎಎಫ್ ಅಧಿಕಾರಿ ಮುಂಬರುವ ವಾರಗಳಲ್ಲಿ ಸರಣಿ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ ಎಂದು ಹೆಸರು ಬಹಿರಂಗಕ್ಕೆ ಇಚ್ಚಿಸದ ಇಬ್ಬರು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ ಎಂದು ಎಂದು  ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಂಗ್ ಕಮಾಂಡರ್ಅಭಿನಂದನ್  ಫೆಬ್ರವರಿ 27 ರಂದು ಪಾಕಿಸ್ತಾನ ವಾಯುಪಡೆ ಜತೆಗಿನ ದಾಳಿಯಲ್ಲಿ  ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದರು. ಆಬಳಿಕ ತಮ್ಮ ಮಿಗ್ ವಿಮಾನ ಪಾಕ್ ನೆಲದಲ್ಲಿ ಪತನವಾದಾಗ ಅಲ್ಲಿನ ಸೈನಿಕರಿಗೆ ಸಿಕ್ಕಿ ಬಿದ್ದಿದ್ದು ಎರಡೂ ವರೆ ದಿನಗಳ ನಂತರ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು.
ಮಾರ್ಚ್ 2 ರಂದು ಭಾರತಕ್ಕೆ ವಾಪಾಸಾಗಿದ್ದ ಅಭಿನಂದನ್ ಗೆ ವಾಯುಪಡೆ ನಾಲ್ಕು ವಾರಗಳ ಕಾಲ ಅನಾರೋಗ್ಯದ ರಜೆ ನೀಡಿತ್ತು. ಆದರೆ ಆ ಸಮಯದಲ್ಲಿಯೂ ಅವರು ಚೆನ್ನೈನಲ್ಲಿನ ತಮ್ಮ ಕುಟುಂಬದವರೊಡನೆ ಇರದೆ ಶ್ರೀನಗರದದ ತಮ್ಮ ಶಿಬಿರದಲ್ಲೇ ಉಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.