ದೇಶ

ಮೋದಿಜೀ ಸೇನೆ ಹೇಳಿಕೆ: ಎಚ್ಚರವಹಿಸುವಂತೆ ಯೋಗಿಗೆ ಚುನಾವಣಾ ಆಯೋಗ ಎಚ್ಚರಿಕೆ

ಭವಿಷ್ಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಭಾರತೀಯ ಸೇನೆಯನ್ನು ಮೋದಿಜೀ ಸೇನೆ ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ...

ಮೋದಿಜೀ ಸೇನೆ ಹೇಳಿಕೆ: ಎಚ್ಚರವಹಿಸುವಂತೆ ಯೋಗಿಗೆ ಚುನಾವಣಾ ಆಯೋಗ ಎಚ್ಚರಿಕೆ
ಯೋಗಿ ಆದಿತ್ಯನಾಥ್
Published On :
ನವದೆಹಲಿ: ಭವಿಷ್ಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಭಾರತೀಯ ಸೇನೆಯನ್ನು ಮೋದಿಜೀ ಸೇನೆ ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಎಚ್ಚರಿಕೆ ನೀಡಿದೆ.
ಮೋದಿಜೀ ಸೇನೆ ಹೇಳಿಕೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಅವರಿಗೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗ ಈ ಸಂಬಂಧ ವರದಿ ನೀಡುವಂತೆ ಘಾಜಿಯಾಬಾದ್ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. 
ಜಿಲ್ಲಾಡಳಿತ ನೀಡಿದ ವರದಿ ಪರಿಶೀಲಿಸಿದ ಚುನಾವಣಾ ಆಯೋಗ, ಯೋಗಿ ಆದಿತ್ಯನಾಥ್ ನೀತಿ ಸಂಹಿತೆ ಉಲ್ಲಂಘಿಸಿದ್ದು ಸ್ಪಷ್ಟವಾಗಿದ್ದು, ಮುಂದೆ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಉತ್ತರ ಪ್ರದೇಶ ಸಿಎಂಗೆ ಚುನಾವಣಾ ಆಯೋಗ ಸೂಚಿಸಿದೆ.
ನೀವು ಒಬ್ಬ ಹಿರಿಯ ನಾಯಕರಾಗಿದ್ದು, ಸಾರ್ವಜನಿಕವಾಗಿ ನಿಮ್ಮಿಂದ ಜವಾಬ್ದಾರಿಯುತ ಹೇಳಿಕೆಗಳನ್ನು ನಿರೀಕ್ಷಿಸುತ್ತೇವೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಈ ತಪ್ಪುಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಚುನಾವಣೆ ವೇಳೆ ರಕ್ಷಣಾ ಪಡೆಗಳನ್ನು ಪ್ರಸ್ತಾಪಿಸಬೇಡಿ ಎಂದು ಚುನಾವಣಾ ಆಯೋಗ ಯೋಗಿ ಆದಿತ್ಯನಾಥ್ ಗೆ ಸಲಹೆ ನೀಡಿದೆ.
ಏಪ್ರಿಲ್ 1ರಂದು ಗಾಜಿಯಾಬಾದ್ ನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ನೀಡಿ ಸತ್ಕರಿಸಿದರೆ, ಮೋದಿ ಸೇನೆ ಉಗ್ರರಿಗೆ ಗುಂಡು ಹೊಡೆದು ತಿರುಗೇಟು ನೀಡಿದೆ ಎಂದಿದ್ದರು.
ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಯನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಟಿಎಂಸಿ ಖಂಡಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.