ಭೀಕರ ಅಪಘಾತ: ಗುಡ್ಡ ಕುಸಿದು ಪ್ರಪಾತಕ್ಕೆ ಉರುಳಿದ ಬಸ್, 13 ಯಾತ್ರಾರ್ಥಿಗಳ ದುರ್ಮರಣ!
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರಾಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ದೇವಸ್ಥಾನದ ದರ್ಶನ ಮಾಡಿ ಹಿಂದಿರುಗುವಾಗ ಟೆಂಪೊ ಟ್ರಾವೆಲರ್ ಮೇಲೆ ಗುಡ್ಡ...

Published On :
ಡೆಹ್ರಾಡೂನ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರಾಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ದೇವಸ್ಥಾನದ ದರ್ಶನ ಮಾಡಿ ಹಿಂದಿರುಗುವಾಗ ಟೆಂಪೊ ಟ್ರಾವೆಲರ್ ಮೇಲೆ ಗುಡ್ಡ ಕುಸಿದು ಟೆಂಪೊ ಪ್ರಪಾತಕ್ಕೆ ಉರುಳಿದ ಪರಿಣಾಮ 13 ಯಾತ್ರಾರ್ಥಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಟೆಂಪೊ ಟ್ರಾವೆಲರ್ ನಲ್ಲಿ 15 ಜನರಿದ್ದು ಈ ಪೈಕಿ ಇಬ್ಬರು ಹುಡುಗಿಯರು ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಮುಂದಾದರು. ಆದರೆ ಅಷ್ಟರಲ್ಲೇ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಭೀಕರ ಅಪಘಾತದಲ್ಲಿ 13 ಮಂದಿ ಯಾತ್ರಾರ್ಥಿಗಳು ದುರ್ಮರಣ ಹೊಂದಿದ್ದು ಈ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಪಘಾತaccidentUttarakhandಉತ್ತರಾಖಂಡ್gorgeKrishna Janmashtamiಕೃಷ್ಣ ಜನ್ಮಾಷ್ಟಮಿVehicle Fallsಕಂದಕಕ್ಕೆ ಉರುಳಿದ ವಾಹನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


