ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಸಿಕ್ಕಿದ್ದು ಏನು ಗೊತ್ತ?
ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಪಾರ್ಸಲ್ ವೊಂದನ್ನು...

Published On :
ಔರಂಗಾಬಾದ್: ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಪಾರ್ಸಲ್ ವೊಂದನ್ನು ಡಿಲಿವೆರಿ ಮಾಡಲಾಗಿತ್ತು. ಅದನ್ನು ಬಿಚ್ಚಿ ನೋಡಿದಾಗ ಗ್ರಾಹಕ ಬೆಪ್ಪಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪ್ರಮುಖ ಆನ್‌ಲೈನ್ ರಿಟೈಲ್ ನಲ್ಲಿ ವ್ಯಕ್ತಿಯೊರ್ವ 9 ಸಾವಿರ ಮುಖಬೆಲೆಯ ಮೊಬೈಲ್ ಫೋನ್ ಅನ್ನು ಬುಕ್ ಮಾಡಿದ್ದ. ತನಗೆ ಬಂದ ಪಾರ್ಸಲ್ ಅನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಇಟ್ಟಿಗೆ ತುಂಡು ಇರುವುದನ್ನು ಕಂಡ ಗ್ರಾಹಕ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾನೆ.
ಔರಂಗಬಾದ್ ನ ಹುಡ್ಕೋ ಪ್ರದೇಶದಲ್ಲಿ ನೆಲೆಸಿರುವ ಗಜಾನನ್ ಖಾರತ್ ಅಕ್ಟೋಬರ್ 9ರಂದು ಆನ್‌ಲೈನ್‌ನಲ್ಲಿ ಮೊಬೈಲ್ ವೊಂದನ್ನು ಬುಕ್ ಮಾಡಿದ್ದಾರೆ. ಆದರೆ ಅವರಿಗೆ ಮೊಬೈಲ್ ಫೋನ್ ಬದಲಿಗೆ ಇಟ್ಟಿಗೆ ತುಂಡನ್ನು ಡೆಲಿವರಿ ಮಾಡಲಾಗಿದೆಯಂತೆ. ಆ ಸಂಬಂಧ ಆತ ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮನೀಶ್ ಕಲ್ಯಾಣಕರ್ ಹೇಳಿದ್ದಾರೆ.
ಇನ್ನು ಪಾರ್ಸೆಲ್ ಡೆಲಿವರಿಯಲ್ಲಿ ಇಟ್ಟಿಗೆ ತುಂಡನ್ನು ಕಂಡ ಕೂಡಲೇ ಗಜಾನನ್ ಡೆಲಿವರಿ ಮಾಡಿದವನಿಗೆ ಕರೆ ಮಾಡಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ತಮಗೆ ಪಾರ್ಸೆಲ್ ಅನ್ನು ಡೆಲಿವರಿ ಮಾಡುವುದಷ್ಟೇ ಕೆಲಸ. ಇದಕ್ಕೂ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಐಪಿಸಿ ಸೆಕ್ಷನ್ ಅಡಿಯಲ್ಲಿ ಆನ್‌ಲೈನ್ ರಿಟೈಲ್ ಸಂಸ್ಥೆ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
mobile phoneonline shoppingಮೊಬೈಲ್ ಫೋನ್Manವ್ಯಕ್ತಿಆನ್ ಲೈನ್ ಶಾಪಿಂಗ್online retailerBricksಆನ್ ಲೈನ್ ಸಂಸ್ಥೆಇಟ್ಟಿಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


